ಕೇಟಿ ಝಕರಿಯಾ ಶ್ವೇತಭವನದ ನೂತನ ಪತ್ರಿಕಾ ಕಾರ್ಯದರ್ಶಿ
ಕೇಟಿ ಝಕರಿಯಾ | Photo Credit : @annamlulis
ವಾಶಿಂಗ್ಟನ್, ಅ.10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಕನ್ಸರ್ವೇಟಿವ್ ವಿಶ್ಲೇಷಕಿ ಮತ್ತು ವಕೀಲೆ ಕೇಟಿ ಝಕರಿಯಾ ಅವರನ್ನು ಶ್ವೇತಭವನದ ನೂತನ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಅಲ್ಲದೆ, ತಮ್ಮ ‘ಮೇಕ್ ಅಮೆರಿಕ ಗ್ರೇಟ್ ಎಗೇನ್’ (ಎಂಎಜಿಎ) ಅಭಿಯಾನದ ನಿಷ್ಠಾವಂತ ಬೆಂಬಲಿಗ ಎಂದು ಅವರನ್ನು ಪ್ರಶಂಸಿಸಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಟ್ರಂಪ್, ‘ಝಕರಿಯಾ ಅವರು ಮೊದಲಿನಿಂದಲೂ ನನ್ನನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಪ್ರಮುಖ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.