ಡೊನಾಲ್ಡ್ ಟ್ರಂಪ್ | Photo Credit : PTI  

ವಾಶಿಂಗ್ಟನ್, ಅ.10: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೆಬನಾನ್‌ಗೆ ತೆರಳುವ ಮತ್ತು ಅಲ್ಲಿಂದ ಬರುವ ವಿಮಾನಗಳ ಮೇಲಿನ ದಶಕಗಳಷ್ಟು ಹಳೆಯ ನಿರ್ಬಂಧಗಳನ್ನು ಅಧಿಕೃತವಾಗಿ ತೆರವುಗೊಳಿಸಿದ್ದು, ಇದು ಎರಡೂ ದೇಶಗಳ ನಡುವೆ ನೇರ ವಿಮಾನ ಹಾರಾಟವನ್ನು ಪುನರಾರಂಭಿಸಲು ಇದ್ದ ಪ್ರಮುಖ ಕಾನೂನು ಅಡೆತಡೆಗಳಲ್ಲಿ ಒಂದನ್ನು ನಿವಾರಿಸಿದೆ.

1985, 1992, 1998 ಮತ್ತು 2007ರಲ್ಲಿ ಹೊರಡಿಸಲಾದ ಅಧ್ಯಕ್ಷೀಯ ಆದೇಶಗಳ ಅಡಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಟ್ರಂಪ್ ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಆದೇಶವನ್ನು ತಕ್ಷಣವೇ ಜಾರಿಗೆ ತರುವಂತೆ ಮತ್ತು ಅದಕ್ಕೆ ವಿರುದ್ಧವಾಗಿರುವ ಯಾವುದೇ ನಿಯಮಗಳು ಅಥವಾ ಆದೇಶಗಳನ್ನು ರದ್ದುಗೊಳಿಸುವಂತೆ ಅಮೆರಿಕದ ಸಾರಿಗೆ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.

ವಾಶಿಂಗ್ಟನ್‌ ನಲ್ಲಿರುವ ಲೆಬನಾನ್ ರಾಯಭಾರ ಕಚೇರಿಯು ಈ ನಿರ್ಧಾರವನ್ನು ಸ್ವಾಗತಿಸಿದೆ. ಇದು ಲೆಬನಾನ್ ಅಧಿಕಾರಿಗಳು ಕೈಗೊಂಡ ಭದ್ರತಾ ಕ್ರಮಗಳ ಮೇಲಿನ ವಿಶ್ವಾಸದ ಪ್ರತೀಕವಾಗಿದೆ ಮತ್ತು ಲೆಬನಾನ್ ಹಾಗೂ ಅಮೆರಿಕದ ನಡುವೆ ನೇರ ವಿಮಾನ ಹಾರಾಟವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಪ್ರಮುಖ ಮೊದಲ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor