×
Ad

ಬಾಂಗ್ಲಾದೇಶದಲ್ಲಿ ಭೂಕುಸಿತ | ಐವರು ಮಕ್ಕಳು ಸೇರಿದಂತೆ 8 ರೊಹಿಂಗ್ಯಾ ನಿರಾಶ್ರಿತರು ಮೃತ್ಯು

Update: 2026-07-07 20:37 IST

Photo Credit : NDTV 

ಢಾಕಾ, ಜು.7: ಪೂರ್ವ ಬಾಂಗ್ಲಾದೇಶದಲ್ಲಿ ಸುರಿದ ಭಾರೀ ಮುಂಗಾರು ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ 8 ಮಂದಿ ರೋಹಿಂಗ್ಯಾ ನಿರಾಶ್ರಿತರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ರವಿವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ನಿರಂತರ ಮಳೆ ಮತ್ತು ಬೆಟ್ಟದ ಮೇಲಿನ ನೀರಿನ ಹರಿವಿನಿಂದಾಗಿ ಇಳಿಜಾರುಗಳಲ್ಲಿನ ಮಣ್ಣು ಸಡಿಲಗೊಂಡು, ತಾತ್ಕಾಲಿಕ ಮನೆಗಳು ಕುಸಿದು ಬಿದ್ದಿವೆ. ನಿರಾಶ್ರಿತರು ನಿದ್ರಿಸುತ್ತಿದ್ದಾಗ ಈ ಭೂಕುಸಿತ ಸಂಭವಿಸಿದ್ದು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಆಶ್ರಯ ತಾಣಗಳು ಹೂತುಹೋಗಿವೆ.

ಈಗಾಗಲೇ ಭೂಕುಸಿತದ ಸ್ಥಳದಿಂದ 8 ಮೃತದೇಹಗಳನ್ನು ಪತ್ತೆಹಚ್ಚಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇಬ್ಬರು ಮಕ್ಕಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಪಾಯದಂಚಿನಲ್ಲಿರುವ ಬೆಟ್ಟದ ಪ್ರದೇಶಗಳಿಂದ ಸುಮಾರು 1,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News