×
Ad

ಸಿಐಎ ಏಜೆಂಟ್ ಎಂದು ನಂಬಿಸಿ ಇಂಡೋನೇಷ್ಯಾದಿಂದ ರಕ್ಷಣಾ ಒಪ್ಪಂದ ಪಡೆದುಕೊಂಡ ಭಾರತೀಯ ಮೂಲದ ವ್ಯಕ್ತಿ

Update: 2026-07-06 22:00 IST

  ಪ್ರಬೋವೊ ಸುಬಿಯಾಂತೊ , ಗೌರವ್ ಶ್ರೀವಾಸ್ತವ | Photo Credit : theweek.in

ಜಕಾರ್ತ, ಜು.6: ಭಾರತೀಯ ಮೂಲದ ಉದ್ಯಮಿಯೊಬ್ಬರು ಸಿಐಎ ಏಜೆಂಟ್ ಎಂದು ನಟಿಸಿ ಇಂಡೋನೇಷ್ಯಾದಲ್ಲಿ ಕೋಟ್ಯಂತರ ಡಾಲರ್ ಮೌಲ್ಯದ ಪ್ರಾಥಮಿಕ ರಕ್ಷಣಾ ಒಪ್ಪಂದಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದಲ್ಲಿ ನೆಲೆಸಿರುವ ಗೌರವ್ ಶ್ರೀವಾಸ್ತವ ಎಂಬಾತ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರು ಆ ದೇಶದ ರಕ್ಷಣಾ ಸಚಿವರಾಗಿದ್ದಾಗ ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದನು. ಶ್ರೀವಾಸ್ತವ ಇಂಡೋನೇಷ್ಯಾದ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ತಾನು ಅಮೆರಿಕದ ಗುಪ್ತಚರ (ಸಿಐಎ) ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದನು ಎಂದು `ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋಟಿರ್ಂಗ್ ಪ್ರಾಜೆಕ್ಟ್' ಮತ್ತು ಇಂಡೋನೇಷ್ಯಾದ `ಟೆಂಪೋ' ಪತ್ರಿಕೆ ಜಂಟಿಯಾಗಿ ನಡೆಸಿದ ತನಿಖೆಯ ವರದಿ ತಿಳಿಸಿದೆ.

ವರದಿಯ ಪ್ರಕಾರ, 2020 ಮತ್ತು 2022ರ ನಡುವೆ, ಶ್ರೀವಾಸ್ತವ ನಿಯಂತ್ರಣದಲ್ಲಿದ್ದ ಕಂಪೆನಿಗಳು ಇಂಡೋನೇಷ್ಯಾದ ರಕ್ಷಣಾ ಸಚಿವಾಲಯ ಮತ್ತು ಸರಕಾರಿ ಸ್ವಾಮ್ಯದ ರಕ್ಷಣಾ ಕಂಪೆನಿಯಿಂದ ಐದು ಪ್ರಾಥಮಿಕ ಒಪ್ಪಂದಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಈ ಪ್ರಾಥಮಿಕ ಒಪ್ಪಂದಗಳಲ್ಲಿ ಫೈಟರ್ ಜೆಟ್‍ಗಳು, ಹೆಲಿಕಾಪ್ಟರ್‌ಗಳು, ಸಾರಿಗೆ ವಿಮಾನಗಳು ಮತ್ತು ಮಿಲಿಟರಿ ಕಮಾಂಡ್ ಸಿಸ್ಟಮ್‍ಗಳನ್ನು ಖರೀದಿಸುವ ಯೋಜನೆಗಳು ಸೇರಿದ್ದವು.

ಇಂಡೋನೇಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ರಿಕೊ ಸಿರೈತ್ ಅವರು ಈ ಪ್ರಾಥಮಿಕ ಒಪ್ಪಂದಗಳು ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಸರಕಾರವು ಈ ಒಪ್ಪಂದಗಳನ್ನು ಮುಂದುವರಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News