ಎಲ್ಲಾ ರಂಗಗಳಲ್ಲೂ ಯುದ್ಧಕ್ಕೆ ನಾವು ಸಿದ್ಧ: ಬಿಲಾವಲ್ ಭುಟ್ಟೋ ಹೇಳಿಕೆ
Update: 2026-07-06 22:12 IST
ಬಿಲಾವಲ್ ಭುಟ್ಟೋ ಜರ್ದಾರಿ | Photo Credit : AP , PTI
ಇಸ್ಲಮಾಬಾದ್, ಜು.6: ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸೋಮವಾರ ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ್ದು ಪಾಕಿಸ್ತಾನವು ಎಲ್ಲಾ ರಂಗಗಳಲ್ಲೂ ಹೋರಾಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತ ಕಳೆದ ವಾರ ಪುನರುಚ್ಚರಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭುಟ್ಟೋ `ಭಾರತವು ಸಿಂಧೂ ನದಿಯ ನೀರನ್ನು ಅಸ್ತ್ರವನ್ನಾಗಿ ಬಳಸಲು ಯತ್ನಿಸುತ್ತಿದ್ದು ಇದು ನಮ್ಮ ವಿರುದ್ಧ ನದಿ ನೀರನ್ನು ಅಸ್ತ್ರವನ್ನಾಗಿ ಬಳಸುವ ಪ್ರಯತ್ನವಾಗಿದೆ. ಪಾಕಿಸ್ತಾನವು ಯುದ್ಧಕ್ಕೆ ಸಿದ್ಧವಾಗಿದೆ ಮತ್ತು ಸಿಂಧೂ ನದಿಯ ಹಕ್ಕುಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲʼ ಎಂದು ಹೇಳಿರುವುದಾಗಿ ವರದಿಯಾಗಿದೆ.