ಸಿಲ್ವಿಯಾ | Photo Credit : Reuters


ವಾಶಿಂಗ್ಟನ್: ಅಮೆರಿಕ ಸೇನೆಯ ವಜಾಗೊಂಡ ಲೆ| ಜ| ಬ್ರೆಟ್ ಸಿಲ್ವಿಯಾ ಅವರು ಉಕ್ರೇನ್ ಮತ್ತು ಇರಾನ್ ಯುದ್ಧಗಳಿಗೆ ಸಂಬಂಧಿಸಿದ ಅತ್ಯಂತ ರಹಸ್ಯ ಮಾಹಿತಿಯನ್ನು ಒಂದು ವರ್ಷದ ಅವಧಿಯಲ್ಲಿ ಇಬ್ಬರು ಬೇರೆ ಬೇರೆ ಮಾಧ್ಯಮಗಳ ಪತ್ರಕರ್ತರಿಗೆ ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಆಂತರಿಕ ತನಿಖಾ ವರದಿಯನ್ನು ಉಲ್ಲೇಖಿಸಿ ಆಕ್ಸಿಯೋಸ್ ವರದಿ ಮಾಡಿದೆ.

ರಕ್ಷಣಾ ಇಲಾಖೆಯ ಉನ್ನತ ಮಿಲಿಟರಿ ಯೋಜನಾಧಿಕಾರಿಯಾಗಿದ್ದ ಸಿಲ್ವಿಯಾ, ನಾಲ್ಕು ಸುಳ್ಳು ಪತ್ತೆ ಪರೀಕ್ಷೆಗಳಲ್ಲಿ ವಿಫಲರಾದ ನಂತರ ರೆಕಾರ್ಡ್ ಮಾಡಲಾದ ಸಂದರ್ಶನದಲ್ಲಿ ಈ ಅನಧಿಕೃತ ಮಾಹಿತಿ ಸೋರಿಕೆಯನ್ನು ಒಪ್ಪಿಕೊಂಡಿದ್ದಾರೆ . ಈ ಮಾಹಿತಿ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಈ ವಾರದ ಆರಂಭದಲ್ಲಿ ಸಿಲ್ವಿಯಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದರು ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor