ಕೆನಡಾದ ಗುರುದ್ವಾರದಲ್ಲಿ ಇಬ್ಬರಿಗೆ ಇರಿದ ವ್ಯಕ್ತಿಯ ಬಂಧನ
Update: 2026-08-22 22:32 IST
Photo Credit : x
ಒಟ್ಟಾವ: ಕೆನಡಾದ ಎಡ್ಮಂಟನ್‍ನಲ್ಲಿರುವ ಗುರುದ್ವಾರವೊಂದರಲ್ಲಿ ಶುಕ್ರವಾರ ಇಬ್ಬರ ಮೇಲೆ ಸ್ಕ್ರೂಡ್ರೈವರ್‌ನಿಂದ ದಾಳಿ ನಡೆಸಿ ಗಾಯಗೊಳಿಸಿದ್ದ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ನಾನಕ್ಸರ್ ಗುರುದ್ವಾರದಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಯು ಗುರುವಾರವಷ್ಟೇ ಫೆಡರಲ್ ಜೈಲಿನಿಂದ ಬಿಡುಗಡೆಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.