ಹಾರ್ಮುಝ್ ಜಲಸಂಧಿ ಅಮೆರಿಕದ ನಿಯಂತ್ರಣದಲ್ಲಿದೆ : ಡೊನಾಲ್ಡ್ ಟ್ರಂಪ್ ಪ್ರತಿಪಾದನೆ

Update: 2026-08-22 21:30 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಆ ದೇಶವು ತೀವ್ರ ಆರ್ಥಿಕ ಮತ್ತು ಮಿಲಿಟರಿ ಒತ್ತಡದಲ್ಲಿದೆ ಹಾಗೂ ಕಾರ್ಯತಾಂತ್ರಿಕವಾಗಿ ಪ್ರಮುಖವಾಗಿರುವ ಹಾರ್ಮುಝ್ ಜಲಸಂಧಿಯು ಪರಿಣಾಮಕಾರಿಯಾಗಿ ಅಮೆರಿಕದ ನಿಯಂತ್ರಣದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ.

ನಾನು ಪ್ರಸ್ತುತ ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಭೂಭಾಗ ಎಂದೇ ನೋಡುತ್ತೇನೆ. ಈ ಜಲಸಂಧಿಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಅಲ್ಲಿಗೆ ವಿಸ್ತರಿಸುವ ಭೂಭಾಗಗಳ ಮೇಲೆ ಅಮೆರಿಕ ಪೂರ್ಣ ನಿಯಂತ್ರಣ ಹೊಂದಿದೆ.

ಅಮೆರಿಕದ ಜೊತೆ ಒಪ್ಪಂದ ಮಾಡಿಕೊಳ್ಳಲು ಇರಾನ್ ತೀವ್ರವಾಗಿ ಬಯಸುತ್ತಿದೆ, ಆದರೆ ಸರಿಯಾದ ಒಪ್ಪಂದಕ್ಕೆ ಬರಲು ಅವರು ಇನ್ನೂ ಸಿದ್ಧವಾಗಿಲ್ಲ. ಇರಾನ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅವರ ಬಳಿ ಹಣವಿಲ್ಲ. ನೌಕಾಪಡೆ ಇಲ್ಲ, ವಾಯುಪಡೆ ಇಲ್ಲ. ಅವರು ತಮ್ಮ ಸೈನಿಕರಿಗೆ ಮತ್ತು ಪೊಲೀಸರಿಗೆ ಸಂಬಳ ನೀಡುತ್ತಿಲ್ಲ. ಅಲ್ಲಿ ಶೇಕಡಾ 350 ರಷ್ಟು ಹಣದುಬ್ಬರವಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದು ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಪಡೆಯಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News