×
Ad

ಕೌಟುಂಬಿಕ ಮನಸ್ತಾಪ ; ಇರಾನ್ ನಲ್ಲಿ ಶೂಟೌಟ್ಗೆ 12 ಮಂದಿ ಬಲಿ

Update: 2024-02-17 22:10 IST

ಹೊಸದಿಲ್ಲಿ: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಮೂವತ್ತು ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ತಂದೆ ಹಾಗೂ ಸಹೋದರ ಸೇರಿದಂತೆ 12 ಮಂದಿ ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆಗೈದ ಭೀಕರ ಘಟನೆ ಇರಾನ್ ಕೆರ್ಮಾನ್ ಪ್ರಾಂತದಲ್ಲಿ ಶುಕ್ರವಾರ ವರದಿಯಾಗಿದೆ.

ಹತ್ಯಾಕಾಂಡವನ್ನು ನಡೆಸಲು ಹಂತಕನು ಕಲ್ಶಾನಿಕೊವ್ ಅಸಾಲ್ಟ್ ರೈಫಲ್ ಬಳಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆನಂತರ ಆತನನ್ನು ಭದ್ರತಾಪಡೆಗಳು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

ಕರ್ಮಾನ್ ಪ್ರಾಂತದ ಅತ್ಯಂತ ದುರ್ಗಮ ಹಳ್ಳಿಯಲ್ಲಿ ಈ ಶೂಟೌಟ್ ನಡೆದಿದ್ದು, ಕೌಟುಂಬಿಕ ವಿವಾದವೇ ಹತ್ಯಾಕಾಂಡಕ್ಕೆ ಕಾರಣವೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News