ಮಿನ್ನೆಸೋಟ ಸಂಸದೆ ಮೆಲಿಸ್ಸಾ ಹೋರ್ಟ್‌ಮನ್, ಪತಿ ಹತ್ಯೆ
PC: x.com/CBCBARBADOS
ಕ್ಯಾಲಿಫೋರ್ನಿಯಾ: ಕಾನೂನು ಜಾರಿ ಅಧಿಕಾರಿಯ ಸೋಗು ಹಾಕಿಕೊಂಡು ಬಂದ ದುಷ್ಕರ್ಮಿಗಳು ಮಿನ್ನೆಸೊಟಾ ಸಂಸದೆ ಮೆಲಿಸ್ಸಾ ಹೋರ್ಟ್ಮನ್ ಹಾಗೂ ಆಕೆಯ ಪತಿಯನ್ನು ಅವರ ಮನೆಯಲ್ಲೇ ಶನಿವಾರ ನಸುಕಿನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸ್ಪೀಕರ್ ಮೆಲಿಸ್ಸಾ ಹೋರ್ಟ್ಮನ್ ಹಾಗೂ ಆಕೆಯ ಪತಿ ದಾಳಿಯಲ್ಲಿ ಹತ್ಯೆಗೀಡಾಗಿದ್ದನ್ನು ಗವರ್ನರ್ ಟಿಮ್ ವಾಲ್ಝ್ ದೃಢಪಡಿಸಿದ್ದಾರೆ. ರಾಜ್ಯದ ಸೆನೆಟ್ ಸದಸ್ಯ ಜಾನ್ ಹಾಫ್‌ಮನ್ ಹಾಗೂ ಆಕೆಯ ಪತ್ನಿಯ ಮೇಲೂ ದಾಳಿ ನಡೆದಿದ್ದು, ಹಾಫ್‌ಮನ್ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಉತ್ತರ ಮಿನ್ನಿಯಾ ಪೊಲೀಸ್ ನ ಪ್ರತ್ಯೇಕ ಎರಡು ಜಿಲ್ಲೆಗಳಲ್ಲಿ ಈ ಘಟನೆಗಳು ನಡೆದಿವೆ. ಇದು ದುರದೃಷ್ಟಕರ ಮತ್ತು ವಿಷಾದನೀಯ ಎಂದು ಗವರ್ನರ್ ಹೇಳಿದ್ದಾರೆ.
ಅಧಿಕಾರಿಗಳು ದಾಳಿಕೋರರ ಉದ್ದೇಶ ಹಾಗೂ ಗುರುತು ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆ ನಡೆಸಿದ್ದಾರೆ. ಆಗಂತುಕರು ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಬಂದು ಮನೆ ಪ್ರವೇಶಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಸಂಕೀರ್ಣ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಈ ದಾಳಿ ಮಿನ್ನೆಸೋಟ ರಾಜಕೀಯ ಸಮುದಾಯಕ್ಕೆ ಆಘಾಥ ತಂದಿದ್ದು, ಅಮೆರಿಕದಾದ್ಯಂತ ರಾಜಕೀಯ ಸಂಘರ್ಷದಿಂದ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆಗಳು ಮತ್ತು ಕಿರುಕುಳ ಸಾಮಾನ್ಯವಾಗಿದೆ.