×
Ad

ಇಮ್ರಾನ್ ಖಾನ್ ಪತ್ನಿಯ ಮನೆಯನ್ನು ಸಬ್‍ಜೈಲು ಎಂದು ಘೋಷಿಸಿದ ಅಧಿಕಾರಿಗಳು

Update: 2024-02-06 22:05 IST

ಇಸ್ಲಮಾಬಾದ್ : ಇಸ್ಲಮಾಬಾದ್‍ನ ಬನಿಗಾಲದಲ್ಲಿ ಇರುವ ತನ್ನ ಮನೆಯನ್ನು ಸಬ್‍ಜೈಲೆಂದು ಘೋಷಿಸುವ ಅಧಿಕಾರಿಗಳ ಕ್ರಮವನ್ನು ತಡೆಯಬೇಕು ಮತ್ತು ತನ್ನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಷ್ರಾ ಬೀಬಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‍ಖಾನ್ ದಂಪತಿಗೆ ವಿಶೇಷ ನ್ಯಾಯಾಲಯ 14 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇಮ್ರಾನ್‍ರನ್ನು ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದ್ದರೆ ಬುಷ್ರಾ ಬೀಬಿಯನ್ನು ಅವರ ಮನೆಯಲ್ಲೇ ಗೃಹ ಬಂಧನದಲ್ಲಿ ಇರಿಸುವ ಜತೆಗೆ, ಮನೆಯನ್ನು ಸಬ್‍ಜೈಲು ಎಂದು ಘೋಷಿಸಲು ಅಧಿಕಾರಿಗಳು ನಿರ್ಧರಿಸಿದ್ದರು ಎಂದು `ದಿ ನ್ಯೂಸ್ ಇಂಟರ್ ನ್ಯಾಷನಲ್' ದಿನಪತ್ರಿಕೆ ವರದಿ ಮಾಡಿದೆ.

ಆದರೆ ಇದನ್ನು ವಿರೋಧಿಸಿರುವ ಬುಷ್ರಾ ಬೀಬಿ `ತಾನು ಸಾಮಾನ್ಯ ಕೈದಿಯಂತೆ ಅಡಿಯಾಲಾ ಜೈಲಿನಲ್ಲಿ ಇರಲು ಬಯಸುತ್ತೇನೆ. ಸಬ್‍ಜೈಲು ಎಂದು ಸರಕಾರ ಘೋಷಿಸಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವುದರಿಂದ ಜೀವ ಭಯ ಎದುರಾಗಿದೆ. ಗುರುತಿಸಲಾಗದ ವ್ಯಕ್ತಿಗಳು ಮನೆಗೆ ಬಂದು ಹೋಗುತ್ತಿರುವುದು ಅಭದ್ರತೆಯ ಭಾವನೆಯನ್ನು ಮೂಡಿಸಿದೆ. ಆದ್ದರಿಂದ ಮನೆಯನ್ನು ಸಬ್‍ಜೈಲು ಎಂದು ಘೋಷಿಸಿರುವ ಕ್ರಮಕ್ಕೆ ತಡೆನೀಡಿ, ತನ್ನನ್ನು ಅಡಿಯಾಲಾ ಜೈಲಿಗೆ ಸ್ಥಳಾಂತರಿಸಬೇಕು ಎಂದು ಬುಷ್ರಾ ಬೀಬಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.    

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News