×
Ad

ಪಾಕಿಸ್ತಾನ: 54 ಉಗ್ರರ ಹತ್ಯೆಗೈದ ಭದ್ರತಾ ಪಡೆ

Update: 2025-04-27 23:37 IST

ಸಾಂದರ್ಭಿಕ ಚಿತ್ರ - Photo : indianexpress

ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಗಡಿದಾಟಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ತೆಹ್ರೀಕೆ ತಾಲಿಬಾನ್ ಗುಂಪಿನ 54 ಸದಸ್ಯರನ್ನು ಹತ್ಯೆ ನಡೆಸಿರುವುದಾಗಿ ಪಾಕಿಸ್ತಾನದ ಮಿಲಿಟರಿ ರವಿವಾರ ಹೇಳಿದೆ.

ವಾಯವ್ಯ ಖೈಬರ್ಪಖ್ತೂಂಕ್ವಾ ಪ್ರಾಂತದ ಉತ್ತರ ವಝೀರಿಸ್ತಾನ ಜಿಲ್ಲೆಯ ಬಳಿ ಅಫ್ಘಾನ್ ಗಡಿಯುದ್ದಕ್ಕೂ ಈ ಘಟನೆ ನಡೆದಿದೆ. ಬಿಬಾಕ್ ಘರ್ ಪ್ರದೇಶದಲ್ಲಿ ಗಡಿಭಾಗದಿಂದ ಕೆಲವರು ಒಳಗೆ ನುಸುಳಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ದೊರಕಿದ ಬಳಿಕ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿದೆ.

ಗುಂಡಿನ ಚಕಮಕಿಯ ಬಳಿಕ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News