ಸಿಜೆಪಿ ಚಳುವಳಿ ಶ್ಲಾಘಿಸಿದ ಪಾಕಿಸ್ತಾನದ ಗೃಹ ಸಚಿವ

Update: 2026-07-30 22:50 IST

ಮೊಹ್ಸಿನ್ ನಖ್ವಿ | Photo Credit : PTI 

ಇಸ್ಲಮಾಬಾದ್, ಜು.30: ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಭಾರತದ ಯುವಕರ ನೇತೃತ್ವದ `ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಚಳುವಳಿಯನ್ನು ಬಹಿರಂಗವಾಗಿ ಶ್ಲಾಘಿಸಿದ್ದು, ಈ ಬೃಹತ್ ಜನಜಾಗೃತಿಯನ್ನು ಪಾಕಿಸ್ತಾನದ ಆಡಳಿತ ವರ್ಗಕ್ಕೆ ನೇರ ಎಚ್ಚರಿಕೆಯಾಗಿ ಬಳಸಿಕೊಂಡಿದ್ದಾರೆ.

ಯುವಜನರ ನೇತೃತ್ವದ ಈ ಹೋರಾಟವು ಇನ್ಮುಂದೆ ಕೇವಲ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ವಿಷಯವಲ್ಲ, ಬದಲಿಗೆ ಇಡೀ ದಕ್ಷಿಣ ಏಷ್ಯಾದ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಮರ್ಥ್ಯವಿರುವ ಶಕ್ತಿಯಾಗಿದೆ. ಪಾಕಿಸ್ತಾನದ ವಿಫಲ ಆಡಳಿತ ವ್ಯವಸ್ಥೆಯನ್ನು ತಿದ್ದದಿದ್ದರೆ, ಇಂತಹದೇ ಚಳವಳಿಯ ಅಲೆಯನ್ನು ಎದುರಿಸಲು ಇಲ್ಲಿನ ರಾಜಕೀಯ ಗಣ್ಯರು ಸಿದ್ಧರಿದ್ದಾರೆಯೇ ಎಂದು ನಖ್ವಿ ಪ್ರಶ್ನಿಸಿದರು.

ಕೇವಲ ವ್ಯವಸ್ಥೆಯ ಬದಲಾವಣೆ, ನ್ಯಾಯಯುತ ಉದ್ಯೋಗ ಮತ್ತು ಮೂಲಭೂತ ನಾಗರಿಕ ಸೌಕರ್ಯಗಳನ್ನು ಮಾತ್ರ ಈ ಭಾಗದ ಯುವ ನಾಗರಿಕರು ಬಯಸುತ್ತಾರೆ. ಕೃಷಿ ಪ್ರಧಾನ ದೇಶವಾಗಿಯೂ ಶತಕೋಟಿ ಮೌಲ್ಯದ ಮೂಲಭೂತ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಎಂಟು ದಶಕಗಳ ನಂತರವೂ ವ್ಯವಸ್ಥೆ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ನಖ್ವಿ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News