ಇರಾನ್‍ಗೆ ಕ್ಷಿಪಣಿ ವ್ಯವಸ್ಥೆ ಒದಗಿಸಲು ಚೀನಾ ಸಜ್ಜು : ವರದಿ
Update: 2026-07-30 21:23 IST
Photo Credit : ANI
ಟೆಹರಾನ್, ಜು.30: ಅಮೆರಿಕದೊಂದಿಗಿನ ಯುದ್ಧದ ನಡುವೆ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಲು ಇರಾನ್ ಮುಂದಾಗಿದ್ದು, ಚೀನಾ ನಿರ್ಮಿತ `ಹೆಗಲ ಮೇಲೆ ಇಟ್ಟು ಹಾರಿಸುವ' 400 ವಾಯು ರಕ್ಷಣಾ ಕ್ಷಿಪಣಿ ಲಾಂಚರ್‌ಗಳ ಪೈಕಿ ಮೊದಲ ಕಂತನ್ನು ಮುಂದಿನ ಕೆಲವು ವಾರಗಳಲ್ಲಿ ಪಡೆಯುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಸುಮಾರು 70 ದಶಲಕ್ಷ ಡಾಲರ್ ಮೌಲ್ಯದ ಈ ಒಪ್ಪಂದವು ಚೀನಾ ನಿರ್ಮಿತ ಕ್ಯುಡಬ್ಲ್ಯು-12 ಮತ್ತು ಎಫ್‍ಎನ್-16 ಕ್ಷಿಪಣಿಗಳನ್ನು ಒಳಗೊಂಡಂತೆ 300 ರಿಂದ 400 ಮ್ಯಾನ್‍ಪ್ಯಾಡ್ಸ್ (ಹೆಗಲ ಮೇಲೆ ಇಟ್ಟು ಹಾರಿಸುವ ವಾಯು ರಕ್ಷಣಾ ವ್ಯವಸ್ಥೆ) ಖರೀದಿ ಪ್ರಕ್ರಿಯೆಯನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.