ಪಶ್ಚಿಮ ದಂಡೆಯಲ್ಲಿ ಹಿಂಸಾಚಾರ, ಅತಿಕ್ರಮಣ ಉಲ್ಬಣ : ವಿಶ್ವಸಂಸ್ಥೆ ಕಳವಳ

Update: 2026-07-29 21:50 IST

Photo Credit : United Nation

ಜಿನೀವಾ(ಎಎಫ್‌ಪಿ), ಜು.29: ಪಶ್ಚಿಮ ದಂಡೆ ಮೇಲಿನ ಇಸ್ರೇಲ್‌ನ ಅತಿಕ್ರಮಣ ಕಾನೂನುಬಾಹಿರ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತೀರ್ಪು ನೀಡಿ ಎರಡು ವರ್ಷಗಳು ಕಳೆದರೂ, ಆ ಪ್ರದೇಶದಲ್ಲಿ ಇಸ್ರೇಲ್‌ ಮೂಲದ ಯಹೂದಿ ಜನಾಂಗೀಯರ ಹಿಂಸಾಚಾರ ಮತ್ತು ಅತಿಕ್ರಮಣ ಮತ್ತಷ್ಟು ಬಿಗಡಾಯಿಸುತ್ತಿದೆ ಎಂದು ವಿಶ್ವಸಂಸ್ಥೆ ಬುಧವಾರ ಕಳವಳ ವ್ಯಕ್ತಪಡಿಸಿದೆ.

ಪಶ್ಚಿಮದಂಡೆಯಲ್ಲಿ ಇಸ್ರೇಲಿ ಯಹೂದಿಗಳ ದಾಳಿಗಳು ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣ ಸಾರ್ವಕಾಲಿಕ ಹೆಚ್ಚಳವನ್ನು ದಾಖಲಿಸಿದ್ದು, ಈ ಕಾನೂನುಬಾಹಿರ ಅತಿಕ್ರಮಣವನ್ನು ಕೊನೆಗೊಳಿಸಲು ಜಾಗತಿಕ ರಾಷ್ಟ್ರಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಆಗ್ರಹಿಸಿದೆ.

‘‘ಇಸ್ರೇಲ್ ಸರಕಾರವು ಪಶ್ಚಿಮದಂಡೆಯಲ್ಲಿ ಯಹೂದಿ ವಸಾಹತುಗಳು ಮತು ಕಿರು ಸೇನಾನೆಲೆಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಹೊರಟಿರುವುದು, ಹಾಗೂ ಇಸ್ರೇಲಿ ನಾಯಕರು ಫೆಲೆಸ್ತೀನ್‌ ಸಮುದಾಯಗಳ ವಿರುದ್ಧ ಸೇಡು ಮತ್ತು ಸಾಮೂಹಿಕ ಶಿಕ್ಷೆಗೆ ಬಹಿರಂಗವಾಗಿ ಕರೆ ನೀಡುತ್ತಿರುವುದು ನಮಗೆ ತೀವ್ರ ಕಳವಳ ತಂದಿದೆ. ಜೊತೆಗೆ, ಪಶ್ಚಿಮದಂಡೆಯನ್ನು ಮತ್ತೊಂದು ’ಗಾಝಾ’ ಮಾಡುತ್ತೇವೆ ಎಂದು ಅವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಕಚೇರಿಯ ವಕ್ತಾರೆ ರವೀನಾ ಶಮ್ದಾಸಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಜುಲೈ 2024 ರಲ್ಲಿ ನೀಡಿದ ಮಹತ್ವದ ತೀರ್ಪೊಂದರಲ್ಲಿ, ಫೆಲೆಸ್ತೀನ್ ಪ್ರದೇಶದ ಮೇಲಿನ ಇಸ್ರೇಲ್‌ನ ದಶಕಗಳ ಕಾಲದ ಆಕ್ರಮಣವು ಕಾನೂನುಬಾಹಿರ ಎಂದು ವಿಶ್ವಸಂಸ್ಥೆ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News