ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಯುದ್ಧ | ಇರಾಕ್ ಮೇಲೆ ಅಮೆರಿಕ-ಸೌದಿ ಜಂಟಿ ದಾಳಿ : 20 ಮಂದಿ ಮೃತ್ಯು
Photo Credit ; aljazeera.com
ದುಬೈ,ಜು.29: ಅಮೆರಿಕ ಹಾಗೂ ಸೌದಿ ಆರೇಬಿಯ ಪಡೆಗಳು ಬುಧವಾರ ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ಮೇಲೆ ಜಂಟಿ ದಾಳಿ ನಡೆಸಿದ್ದು, 20ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿವೆ. ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರ ಇರಾನ್ ವಿರುದ್ಧ ಬಾಂಬ್ ದಾಳಿಗಳನ್ನು ಅಮಾನತಿನಲ್ಲಿರಿದ ಬಳಿಕ ನಡೆದ ಮೊದಲ ವಾಯುದಾಳಿ ಇದಾಗಿದೆ.
ಈ ಮಧ್ಯೆ ಇರಾನ್, ಹಾರ್ಮುಝ್ ಜಲಸಂಧಿಯನ್ನು ಜಂಟಿಯಾಗಿ ನಿರ್ವಹಿಸುವ ಒಮಾನ್‌ನ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ಹಾರ್ಮುಝ್ ಜಲಸಂಧಿಯನ್ನು ದಾಟುತ್ತಿದ್ದ ಹಡಗುಗಳು ಹಾಗೂ ಜೋರ್ಡಾನ್‌ನಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ತಾನು ದಾಳಿ ನಡೆಸಿರುವುದಾಗಿ ಅದು ಹೇಳಿದೆ.
ಕಳೆದ ವಾರ ಟ್ರಂಪ್ ಅವರು ಇರಾನ್ ವಿರುದ್ಧದ ದಾಳಿಯನ್ನು ಕಳೆದ ವಾರ ಸ್ಥಗಿತಗೊಳಿಸಿದ ಬಳಿಕ ಕೊಂಚ ತಗ್ಗಿದ್ದ ತೈಲ ಬೆಲೆಗಳು, ಸಂಘರ್ಷ ಮತ್ತೆ ಭುಗಿಲೆದ್ದ ಪರಿಣಾಮವಾಗಿ ಹೆಚ್ಚಳವಾಗುವ ಆತಂಕವನ್ನು ಮೂಡಿಸಿದೆ.
ಇರಾಕ್‌ನ ವಿವಿಧೆಡೆ ಸೌದಿ-ಅಮೆರಿಕ ನಡೆಸಿದ ಜಂಟಿ ದಾಳಿಗಳಲ್ಲಿ ತನ್ನ 20 ಮಂದಿ ಕಾರ್ಯಕರ್ತರುಊ ಸಾವನ್ನಪ್ಪಿದ್ದಾರೆ ಹಾಗೂ ಇತರ 32 ಮಂದಿ ಗಾಯಗೊಂಡಿದ್ದಾರೆಂದು ಇರಾಕ್‌ನ ಪೊಪ್ಯೂಲಕ್ ಮೊಬೈಲೈಸೇಶನ್ ಫೋರ್ಸಸ್ (ಪಿಎಂಎಫ್) ತಿಳಿಸಿದೆ.
ಅಮೆರಿಕ ಪಡೆಗಳು ಹಾಗೂ ಸೌದಿಯ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಇರಾನ್ ಬೆಂಬಲಿತ ಸಶಸ್ತ್ರ ಪಡೆಗಳನ್ನು ಗುರಿಯಾಗಿಸಿ ಬುಧವಾರ ಮುಂಜಾನೆ ಜಂಟಿ ವಾಯುದಾಳಿಗಳನ್ನು ನಡೆಸಿರುವುದಾಗಿ ಸೌದಿ ಆರೇಬಿಯ ಹಾಗೂ ಅಮೆರಿಕದ ಸೆಂಟ್ರಲಂ ಕಮಾಂಡ್ (ಸೆಂಟ್‌ಕಾಮ್) ತಿಳಿಸಿದೆ.