ಗಾಝಾದಲ್ಲಿ ಇಸ್ರೇಲ್ನ ದಾಳಿಗೆ ಶಾಂತಿ ಮಂಡಳಿ ಮುಖ್ಯಸ್ಥರಿಂದ ಖಂಡನೆ
ನಿಕೋಲಾಯ್ ಮ್ಲಾಡೆನೋವ್ | Photo Credit : UN photo
ವಿಶ್ವಸಂಸ್ಥೆ: ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಿರಂತರ ನಡೆಸುತ್ತಿರುವ ದಾಳಿಗಳನ್ನು ಗಾಝಾದಲ್ಲಿ ಕದನ ವಿರಾಮ ಜಾರಿಗೆ ತರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ನಿಕೋಲಾಯ್ ಮ್ಲಾಡೆನೋವ್ ಟೀಕಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಅವರು `ಟ್ರಂಪ್ ಅವರ 20 ಅಂಶಗಳ ಯೋಜನೆ ಸ್ಥಗಿತಗೊಂಡಿಲ್ಲ. ಅದು `ಸಂಸದೀಯ ಮಾತುಕತೆಯ ಮೇಜಿನಿಂದ ಮುಂದಿನ ಹಂತಕ್ಕೆ ಸ್ಥಳಾಂತರಗೊಂಡಿದೆ ಎಂದು ಪ್ರತಿಪಾದಿಸಿದರು.
ಅಸ್ತ್ರತ್ಯಾಗ ಮಾಡುವುದು ಮತ್ತು ಗಾಝಾವನ್ನು ನಾಗರಿಕ ಆಡಳಿತಕ್ಕೆ ಹಸ್ತಾಂತರಿಸುವುದು ಎಂಬ ಈ ಪ್ರಸ್ತಾವನೆಯ ಮುಖ್ಯ ಷರತ್ತಿಗೆ ಹಮಾಸ್ ಒಪ್ಪಿಕೊಂಡಿದೆ. ಆದರೆ, ಕಳೆದ ಅಕ್ಟೋಬರ್‌ನ ಕದನ ವಿರಾಮದ ನಂತರವೂ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಗಳು ಇನ್ನೂ ಫೆಲೆಸ್ತೀನಿಯರನ್ನು ಬಲಿ ಪಡೆಯುತ್ತಿವೆ ಎಂದು ಅವರು ಖಂಡಿಸಿದ್ದಾರೆ.