×
Ad

ಇಸ್ಲಮಾಬಾದ್ ಪ್ರೆಸ್ ಕ್ಲಬ್ ಮೇಲೆ ಪೊಲೀಸರ ದಾಳಿ : ಪಾಕ್ ಪತ್ರಕರ್ತರಿಂದ `ಕರಾಳ ದಿನಾಚರಣೆ'

Update: 2025-10-03 22:03 IST

Photo Credit : ANI

ಇಸ್ಲಮಾಬಾದ್, ಅ.3: ಇಸ್ಲಮಾಬಾದ್ ಪ್ರೆಸ್ ಕ್ಲಬ್ ಮೇಲೆ ಗುರುವಾರ ಪೊಲೀಸರು ದಾಳಿ ನಡೆಸಿ ಪತ್ರಕರ್ತರನ್ನು ಥಳಿಸಿರುವುದಾಗಿ ಆರೋಪಿಸಿರುವ ಪಾಕಿಸ್ತಾನದ ಪತ್ರಕರ್ತರು ಇದನ್ನು ಖಂಡಿಸಿ ಶುಕ್ರವಾರ ಕರಾಳ ದಿನ ಆಚರಿಸಿರುವುದಾಗಿ ವರದಿಯಾಗಿದೆ.

ಗುರುವಾರ `ನ್ಯಾಷನಲ್ ಪ್ರೆಸ್ ಕ್ಲಬ್‍ನಲ್ಲಿ `ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ ವಕೀಲರ ಸಂಘ' ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಪತ್ರಕರ್ತರನ್ನು ಥಳಿಸಿದ್ದಾರೆ ಎಂದು `ಪಾಕಿಸ್ತಾನ್ ಫೆಡರಲ್ ಯೂನಿಯನ್ ಆಫ್ ಜರ್ನಲಿಸ್ಟ್(ಪಿಎಫ್‍ಯುಜೆ) ಅಧ್ಯಕ್ಷ ಅಫ್ಜಲ್ ಬಟ್ ಆರೋಪಿಸಿದ್ದು ಇದನ್ನು ಖಂಡಿಸಿ ಶುಕ್ರವಾರ ಪಾಕಿಸ್ತಾನದಾದ್ಯಂತ ಪ್ರೆಸ್ ಕ್ಲಬ್‍ಗಳು ಕಪ್ಪು ಧ್ವಜ ಹಾರಿಸಿ ಪ್ರತಿಭಟನೆ ನಡೆಸಿವೆ ಎಂದಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿಯನ್ನು ಉಲ್ಲೇಖಿಸಿ `ದಿ ಡಾನ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News