ಟೆಹ್ರಾನ್ ನಲ್ಲಿ ಇಸ್ರೇಲಿ ಕ್ಷಿಪಣಿ ದಾಳಿ: ಆಂಬ್ಯುಲೆನ್ಸ್ ಬೆಂಕಿಗಾಹುತಿ
Update: 2026-03-08 06:15 IST
PC | X@FarsNews_Agency
ಟೆಹ್ರಾನ್: ಇರಾನ್ ನ ರಾಜಧಾನಿ ಟೆಹ್ರಾನ್ ನಲ್ಲಿ ಇಸ್ರೇಲಿ ಕ್ಷಿಪಣಿ ದಾಳಿಯ ಬಳಿಕ ಆಂಬ್ಯುಲೆನ್ಸ್ ಒಂದು ನಾಶವಾಗಿ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫಾರ್ಸ್ ಸಂಸ್ಥೆ ಎಕ್ಸ್ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಆಂಬ್ಯುಲೆನ್ಸ್ ಬೆಂಕಿಗೆ ಆಹುತಿಯಾಗಿರುವುದು ಕಾಣಿಸುತ್ತದೆ. ತುರ್ತು ಸೇವೆಯ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವ ದೃಶ್ಯವೂ ಅದರಲ್ಲಿ ಕಂಡುಬಂದಿದೆ.
ಸಿಟಿಜನ್ ಜರ್ನಲಿಸಂ ಗುಂಪಾದ ‘ಮಾಮ್ಲೆಕೇಟ್’ ಕೂಡ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಟೆಹ್ರಾನ್‌ನ ಪೂರ್ವ ಭಾಗದಲ್ಲಿರುವ ಟೆಹ್ರಾನ್ ಪಾರ್ಸ್ ಜಿಲ್ಲೆಯ ಒಂದು ಗಲ್ಲಿಯ ಮೂಲಕ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್ ಜೋರಾದ ಸ್ಫೋಟದ ಬಳಿಕ ಏಕಾಏಕಿ ನಿಂತಿದೆ ಎಂದು ವರದಿ ಮಾಡಿದೆ.
ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ತಕ್ಷಣ ಲಭ್ಯವಾಗಿಲ್ಲ.