×
Ad

ಖತರ್‌ ನಲ್ಲಿರುವ ಅಮೆರಿಕ ವಾಯುನೆಲೆಯ ಕೆಲವು ಸಿಬ್ಬಂದಿಗೆ ನಿರ್ಗಮಿಸಲು ಸೂಚನೆ

Update: 2026-01-14 22:10 IST

Photo Credit : aljazeera.com

ದೋಹ, ಜ.14: ಬುಧವಾರ ಸಂಜೆಯೊಳಗೆ ಖತರ್‌ ನಲ್ಲಿರುವ ಅಮೆರಿಕ ಮಿಲಿಟರಿಯ ಅಲ್ ಉದೈದ್ ವಾಯುನೆಲೆಯನ್ನು ತೊರೆಯುವಂತೆ ಕೆಲವು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಲ್ ಉದೈದ್ ಮಧ್ಯಪ್ರಾಚ್ಯದ ಅತಿದೊಡ್ಡ ಅಮೆರಿಕಾ ಮಿಲಿಟರಿ ನೆಲೆಯಾಗಿದ್ದು, ಅಮೆರಿಕಾದ ಸುಮಾರು 10,000 ಯೋಧರನ್ನು ಇಲ್ಲಿ ನೆಲೆಗೊಳಿಸಲಾಗಿದೆ. ಇದು ಕಾರ್ಯತಂತ್ರದ ಬದಲಾವಣೆಯಾಗಿದ್ದು ಸ್ಥಳಾಂತರವಲ್ಲ. ಈ ಕ್ರಮಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ ಎಂದು ರಾಜತಾಂತ್ರಿಕ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News