ಅಪಾಯದಲ್ಲಿರುವ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ವೆನಿಸ್ ಸೇರ್ಪಡೆಗೆ ಶಿಫಾರಸು
ಪ್ಯಾರಿಸ್: ವಿಶ್ವದಾದ್ಯಂತ ಅಪಾಯದಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಇಟಲಿಯ ನಗರ ವೆನಿಸ್ ಅನ್ನು ಸೇರ್ಪಡೆಗೊಳಿಸುವಂತೆ ಯುನೆಸ್ಕೋ ವರದಿ ಮಾಡಿದೆ.
ಅಗಾಧ ಪ್ರವಾಸೋದ್ಯಮ, ಅತಿಯಾದ ಅಭಿವೃದ್ಧಿ, ಹವಾಮಾನ ಬದಲಾವಣೆಯಿಂದ ಏರುತ್ತಿರುವ ಸಮುದ್ರ ಮಟ್ಟವು ವೆನಿಸ್ ನಗರವನ್ನು ಸರಿಪಡಿಸಲಾಗದ ಮಟ್ಟಿಗೆ ಹಾನಿಗೊಳಿಸಿದೆ ಎಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕøತಿಕ ಸಂಘಟನೆ (ಯುನೆಸ್ಕೊ) ಎಚ್ಚರಿಕೆ ನೀಡಿದೆ.
ವೆನಿಸ್‍ನಲ್ಲಿ ದೀರ್ಘಾವಧಿಯಿಂದ ಇರುವ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಯುನೆಸ್ಕೋ ಇಟಲಿ ಸರಕಾರಕ್ಕೆ ಕರೆ ನೀಡಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ 1,157 ಪ್ರದೇಶಗಳಲ್ಲಿ ವೆನಿಸ್ ಸ್ಥಾನಪಡೆದಿದೆ. ಕಾಲುವೆಗಳು ಮತ್ತು ಸಾಂಸ್ಕøತಿಕ ತಾಣಗಳಿಗೆ ಹೆಸರುವಾಸಿಯಾದ ವೆನಿಸ್‍ಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.
ಸೆಪ್ಟಂಬರ್‍ನಲ್ಲಿ ರಿಯಾದ್‍ನಲ್ಲಿ ನಡೆಯಲಿರುವ ಯುನೆಸ್ಕೋದ 21 ಸದಸ್ಯರ ಸಮಿತಿಯು 200ರಷ್ಟು ಪ್ರದೇಶಗಳಲ್ಲಿ ಯಾವುದನ್ನು ಅಪಾಯದಲ್ಲಿರುವ ಸ್ಥಳಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂಬುದನ್ನು ನಿರ್ಧರಿಸಲಿದೆ. ಉಕ್ರೇನ್‍ನ ಕೀವ್ ಮತ್ತು ಲಿವಿವ್ ನಗರಗಳನ್ನು ಈ ವರ್ಷ ಅಪಾಯದಲ್ಲಿರುವ ಸ್ಥಳಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಶಿಫಾರಸು ಮಾಡಲಾಗಿದೆ.