ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೊಝಿನ್ ಸಾವು ದೃಢಪಡಿಸಿದ ರಶ್ಯ
Update: 2023-08-27 23:21 IST
Photo:Twitter
ಮಾಸ್ಕೊ, ಆ.27: ವ್ಯಾಗ್ನರ್ ಗುಂಪಿನ ಮುಖಂಡ ಯೆವ್‍ಗಿನಿ ಪ್ರಿಗೊಝಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದನ್ನು ಕಡೆಗೂ ರಶ್ಯ ದೃಢಪಡಿಸಿದೆ.
ವಿಮಾನ ದುರಂತ ನಡೆದ ಸ್ಥಳದಲ್ಲಿ ಛಿದ್ರಗೊಂಡು ಪತ್ತೆಯಾಗಿದ್ದ ಮೃತದೇಹಗಳ ಡಿಎನ್‍ಎ ಪರೀಕ್ಷೆ ನಡೆಸಲಾಗಿದ್ದು ಮೃತದೇಹಗಳಲ್ಲಿ ಒಂದು ಪ್ರಿಗೊಝಿನ್‍ರದ್ದು. ಉಳಿದ 9 ಮೃತದೇಹಗಳ ಗುರುತನ್ನೂ ಪತ್ತೆಹಚ್ಚಲಾಗಿದೆ. ಪ್ರಿಗೊಝಿನ್ ಬಲಗೈ ಬಂಟ ಎಂದೇ ಹೆಸರಾಗಿದ್ದ ಡಿಮಿಟ್ರಿ ಉಟ್ಕಿನ್ ಅವರೂ ಮೃತರಲ್ಲಿ ಸೇರಿದ್ದಾರೆ ಎಂದು ರಶ್ಯ ಅಧಿಕಾರಿಗಳು ರವಿವಾರ ದೃಢಪಡಿಸಿದ್ದಾರೆ.