ಉಕ್ರೇನ್ ರೈಲ್ವೆ ನಿಲ್ದಾಣದ ಮೇಲೆ ರಶ್ಯದಿಂದ ಡ್ರೋನ್ ದಾಳಿ: 13 ಮಂದಿ ಮೃತ್ಯು
Photo Credit : aljazeera.com
ಕೀವ್: ಉಕ್ರೇನ್ನ ಡ್ನಿಪ್ರೊದಲ್ಲಿರುವ ಜನನಿಬಿಡ ರೈಲ್ವೆ ನಿಲ್ದಾಣದ ಫ್ಲಾಟ್ಫಾರ್ಮ್ಗೆ ಗುರುವಾರ ರಶ್ಯದ ಡ್ರೋನ್ ಅಪ್ಪಳಿಸಿದ್ದು, ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಡ್ನಿಪ್ರೊ ರೈಲು ನಿಲ್ದಾಣದಲ್ಲಿ ಎರಡು ಪ್ರಯಾಣಿಕರ ರೈಲುಗಳು ನಿಂತಿದ್ದ ಫ್ಲಾಟ್ಫಾರ್ಮ್ ಮೇಲೆ ದಾಳಿ ನಡೆದಿದೆ. ಉಕ್ರೇನ್ ವಾಯುಪಡೆಯು ಮೂರು ಜೆಟ್ ಚಾಲಿತ ಡ್ರೋನ್ಗಳನ್ನು ಹೊಡೆದುರುಳಿಸಿತು. ಆದರೆ ನಾಲ್ಕನೇ ಡ್ರೋನ್ ವಾಯುರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ನಿಲ್ದಾಣಕ್ಕೆ ಅಪ್ಪಳಿಸಿತು ಎಂದು ವಾಯುಪಡೆ ತಿಳಿಸಿದೆ.
ಉಕ್ರೇನ್ನಾದ್ಯಂತ ರಶ್ಯ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ. ಕೀವ್ನ ಉತ್ತರಕ್ಕಿರುವ ಚೆರ್ನಿಗಿವ್ ನಗರದ ಮಧ್ಯಭಾಗದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದು, ಹದಿನಾರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೇಂದ್ರ ನಗರವಾದ ಕ್ರೆಮೆನ್ಚುಕ್ನಲ್ಲಿ ಬಹುಮಹಡಿ ವಸತಿ ಕಟ್ಟಡಕ್ಕೆ ಡ್ರೋನ್ ಅಪ್ಪಳಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಆರು ವರ್ಷದ ಮಗು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.