ಗಾಝಾ, ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲ್ ನಿಂದ ಮತ್ತೆ ದಾಳಿ: 11 ಮಂದಿಗೆ ಗಾಯ
Photo: screengrab/x.com/manniefabian
ಗಾಝಾ: ಗಾಝಾ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ಫೆಲೆಸ್ತೀನಿಯನ್ನರ ಮೇಲಿನ ಇಸ್ರೇಲಿನ ದಾಳಿಗಳು ಮುಂದುವರಿದಿವೆ. ಗಾಝಾ ನಗರದ ಪೂರ್ವ ಭಾಗದಲ್ಲಿರುವ ತುಫ್ಫಾ ಬಡಾವಣೆಯ ಮನೆಯೊಂದನ್ನು ಗುರಿಯಾಗಿಸಿಕೊಂಡು ನಡೆಸಿದ ಫಿರಂಗಿ ದಾಳಿಯಲ್ಲಿ ಏಳು ಫೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು Aljazeera ಗೆ ತಿಳಿಸಿವೆ.
ಇನ್ನೊಂದೆಡೆ, ಆಕ್ರಮಿತ ವೆಸ್ಟ್ ಬ್ಯಾಂಕ್ ನ ದಕ್ಷಿಣ ಹೆಬ್ರಾನ್ ನಲ್ಲಿ ಇಸ್ರೇಲಿನ ವಸಾಹತುಗಾರರ ದಾಳಿಗೆ ಇಬ್ಬರು ಫೆಲೆಸ್ತೀನಿಯನ್ನರು ಮತ್ತು ಇಬ್ಬರು ವಿದೇಶಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಸ್ಥಳದಲ್ಲಿರುವ ವರದಿಗಾರರು ತಿಳಿಸಿದ್ದಾರೆ.