ಡೊನಾಲ್ಡ್ ಟ್ರಂಪ್ (Photo: PTI)

ವಾಶಿಂಗ್ಟನ್: ಕೃತಕ ಬುದ್ಧಿಮತ್ತೆ (ಎಐ) ರೇಸ್‍ನಲ್ಲಿ ಅಮೆರಿಕದ ನಾಯಕತ್ವವನ್ನು ಕಾಯ್ದುಕೊಳ್ಳಲು `ಸೂಪರ್ ಇಂಟೆಲಿಜೆನ್ಸ್ ಫೋರ್ಸ್' (ಎಸ್‍ಐಎಫ್) ರಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಘೋಷಿಸಿದ್ದಾರೆ.

ಕಳೆದ ತಿಂಗಳಷ್ಟೇ ಎಐ ತಂತ್ರಜ್ಞಾನವನ್ನು `ಸೂಪರ್ ಇಂಟೆಲಿಜೆನ್ಸ್' ಎಂದು ಮರುನಾಮಕರಣ ಮಾಡಿದ್ದ ಟ್ರಂಪ್, ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪಾಯಗಳನ್ನು ತಳ್ಳಿಹಾಕಿದ್ದರು.

ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜೇ ಕ್ಲೇಟನ್ ಅವರನ್ನು ತಮ್ಮ ಆಡಳಿತದ ಎಐ ಮುಖ್ಯಸ್ಥ ಎಂದು ಹೆಸರಿಸಿದ ಟ್ರಂಪ್, ಎಸ್‍ಐಎಫ್ ಸಂಸ್ಥೆಯು ಅಮೆರಿಕ ಸರಕಾರದ ವಿವಿಧ ಪಾಲುದಾರರೊಂದಿಗೆ ಸಮನ್ವಯ ಸಾಧಿಸಲು ನೆರವಾಗಲಿದೆ ಮತ್ತು ಇದು ನೇರವಾಗಿ ತಮಗೆ ಹಾಗೂ ತಮ್ಮ ಸಿಬ್ಬಂದಿ ಮುಖ್ಯಸ್ಥರಾದ ಸೂಸಿ ವೈಲ್ಸ್ ಅವರಿಗೆ ವರದಿ ಮಾಡಲಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor