×
Ad

6 ಮಂದಿ ಪ್ರಯಾಣಿಕರಿದ್ದ ರಷ್ಯಾ ವಿಮಾನ ಪತನ

Update: 2024-01-21 19:00 IST

ಸಾಂದರ್ಭಿಕ ಚಿತ್ರ | Photo: PTI

ಕಾಬೂಲ್: ಉಝ್ಬೆಕಿಸ್ತಾನದ ಮೂಲಕ ಮಾಸ್ಕೊಗೆ ಭಾರತದಿಂದ ತೆರಳುತ್ತಿದ್ದ ರಷ್ಯಾ ಚಾರ್ಟರ್ಡ್ ವಿಮಾನವೊಂದು ಶನಿವಾರ ರಾತ್ರಿ ಅಫ್ಘಾನಿಸ್ತಾನದ ಮೇಲೆ ರಡಾರ್ ಸಂಪರ್ಕ ಕಳೆದುಕೊಂಡಿದ್ದು, ಅಪಘಾತಕ್ಕೀಡಾಗಿರಬಹುದು ಎಂದು ಶಂಕಿಸಲಾಗಿದೆ. ಆ ವಿಮಾನದಲ್ಲಿ ಆರು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದರ ಬೆನ್ನಿಗೇ ಪ್ರಾಂತೀಯ ಮುಖ್ಯ ಕಚೇರಿಯಾದ ಫಯಾಝಾಬಾದ್ ನಿಂದ 200 ಕಿಮೀ ದೂರವಿರುವ ಬಡಖ್ ಶಾನ್ ಪ್ರಾಂತ್ಯದ ಗುಡ್ಡಗಾಡು ಪ್ರದೇಶದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ ಎಂದು ಅಫ್ಘನ್ ಪ್ರಾಧಿಕಾರಗಳು ವರದಿ ಮಾಡಿವೆ. Associated Press ಸುದ್ದಿ ಸಂಸ್ಥೆ ಪ್ರಕಾರ, ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಕಚೇರಿಯೂ ವಿಮಾನ ಅಪಘಾತದ ಸುದ್ದಿಯನ್ನು ದೃಢಪಡಿಸಿದೆ.

ಈ ನಡುವೆ, “ಆ ವಿಮಾನವು ಭಾರತದಿಂದ ನಿರ್ಗಮಿಸಲು ನಿಗದಿಯಾಗಿದ್ದ ಅಥವಾ ನಿಗದಿಯಾಗದಿದ್ದ ಚಾರ್ಟರ್ಡ್ ವಿಮಾನವಾಗಿರಲಿಲ್ಲ” ಎಂದು ಭಾರತೀಯ ನಾಗರಿಕ ವಿಮಾನ ಯಾನ ಸಚಿವಾಲಯವು ಸ್ಪಷ್ಟನೆ ನೀಡಿದೆ. ಆ ವಿಮಾನವು ಬಿಹಾರದ ಗಯಾದಿಂದ ತಾಷ್ಕೆಂಟ್ ಗೆ ತೆರಳಿ ನಂತರ ಮಾಸ್ಕೊ ತಲುಪಬೇಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News