×
Ad

ಕೆಂಟ್ ನಗರ ಸಮಿತಿ ಅಧ್ಯಕ್ಷೆಯಾಗಿ ಸತ್ವೀಂದರ್ ಕೌರ್ ಆಯ್ಕೆ

Update: 2024-02-09 22:36 IST

Photo: Kent Washington

ವಾಷಿಂಗ್ಟನ್ : ಅಮೆರಿಕದ ವಾಷಿಂಗ್ಟನ್ ರಾಜ್ಯದ ಕೆಂಟ್ ನಗರ ಸಮಿತಿಯ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅಮೆರಿಕನ್ ಸತ್ವೀಂದರ್ ಕೌರ್ ಆಯ್ಕೆಯಾಗಿದ್ದಾರೆ.

ಬಿಲ್ ಬಾಯ್ಸ್ ಅವರ ಸ್ಥಾನಕ್ಕೆ ಆಯ್ಕೆಗೊಂಡಿರುವ ಕೌರ್ ಅವರ ಕಾರ್ಯಾವಧಿ 2 ವರ್ಷಗಳಾಗಿವೆ. ಸಮಿತಿ ಅಧ್ಯಕ್ಷರು ನಗರದ ಮೇಯರ್ ಜತೆ ನಿಕಟವಾಗಿ ಕೆಲಸ ಮಾಡಬೇಕು ಮತ್ತು ಸಮಿತಿಯ ಅಧಿಕೃತ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಾರೆ. 2021ರಲ್ಲಿ ಕೌರ್ ಅವರು 4 ವರ್ಷದ ಅವಧಿಗೆ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News