Photo Credit ; PTI 

ಹೊಸದಿಲ್ಲಿ, ಅ. 14: ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವುದನ್ನು ಖಂಡಿಸಿ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (SFI) ಮತ್ತು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕಾರ್ಯಕರ್ತರು ಬುಧವಾರ ಹೊಸದಿಲ್ಲಿಯ ಫಿರೋಜ್ ಶಾ ರಸ್ತೆಯಿಂದ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದರು.

ಆದರೆ, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಅವರನ್ನು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ತಳ್ಳಾಟ ನಡೆದು, ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಜಂಟಿ ಮೆರವಣಿಗೆಯ ಸಂದರ್ಭದಲ್ಲಿ SFI ಹಾಗೂ DYFI ಕಾರ್ಯಕರ್ತರು ‘ಜಂತರ್ ಮಂತರ್ ಅನ್ನು ಮರಳಿ ಪಡೆದುಕೊಳ್ಳಿ’ ಮತ್ತು ‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು’ ಎಂಬ ಘೋಷಣೆಗಳನ್ನು ಕೂಗಿದರು.

ಜಂತರ್ ಮಂತರ್ ಅನ್ನು ನಿಗದಿತ ಪ್ರತಿಭಟನಾ ಸ್ಥಳವಾಗಿ ಮರುಸ್ಥಾಪಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂಬ ತಮ್ಮ ಬೇಡಿಕೆಗಳನ್ನು ಅವರು ಪುನರುಚ್ಚರಿಸಿದರು.

ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ನಿರ್ಧಾರವನ್ನು ಪುನರುಚ್ಚರಿಸಿದ ವಿದ್ಯಾರ್ಥಿ ಕಾರ್ಯಕರ್ತರು, ಜಂತರ್ ಮಂತರ್ ಅನ್ನು ‘ಮರಳಿ ಪಡೆದುಕೊಳ್ಳಲಾಗುವುದು’ ಎಂದರು. ಅಲ್ಲದೆ, ಹೆಚ್ಚಿನ ಜನರು ಸೇರುತ್ತಿರುವುದರಿಂದ ಪ್ರತಿಭಟನೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ತಿಳಿಸಿದರು.

ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕಿನ ಮೇಲಿನ ನಿರ್ಬಂಧಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಈ ಸಂಘಟನೆಗಳು, ಸಾರ್ವಜನಿಕ ಪ್ರತಿಭಟನೆಗಳಿಗಾಗಿ ಆ ಸ್ಥಳವನ್ನು ಮರಳಿ ಪಡೆದುಕೊಳ್ಳುವಂತೆ ಕರೆ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor