Photo Credit : AP

ರಿಯಾದ್: ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ತೈಲ ಘಟಕಗಳ ಮೇಲೆ ದಾಳಿಗಳನ್ನು ಮುಂದುವರಿಸುವುದಾಗಿ ಯೆಮನ್‌ನ ಹೌತಿ ಬಂಡುಕೋರರು ಬುಧವಾರ ಎಚ್ಚರಿಕೆ ನೀಡಿದ್ದಾರೆ ಎಂದು reuters.com ವರದಿ ಮಾಡಿದೆ.

ತೈಲ ದೈತ್ಯ ಕಂಪೆನಿ ಸೌದಿ ಅರಾಮ್ಕೊದ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಿರುವುದಾಗಿ ಹೌತಿ ಬಂಡುಕೋರರು ತಿಳಿಸಿದ್ದಾರೆ.

ಧಹ್ರಾನ್‌ನಲ್ಲಿರುವ ಸೌದಿ ಅರಾಮ್ಕೊ ಘಟಕಗಳು, ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಿಯಾದ್‌ನಲ್ಲಿರುವ ಅರಾಮ್ಕೊ ತೈಲ ಸಂಸ್ಕರಣಾಗಾರದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಹೌತಿ ಹೇಳಿದೆ. ಆದರೆ, ಈ ದಾಳಿ ಯಾವಾಗ ನಡೆದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಕಳೆದ ಒಂದು ವಾರದಿಂದ ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಶನಿವಾರ ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯೂ ಇದರಲ್ಲಿ ಸೇರಿದ್ದು, ಈ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor