×
Ad

ಹಾರ್ಮುಝ್ ಜಲಸಂಧಿ ಎಲ್ಲರಿಗೂ ಮುಕ್ತವಾಗಿದೆ : ಅಮೆರಿಕ ಹೇಳಿಕೆ

Update: 2026-07-12 21:48 IST

Photo Credit : PTI 

ವಾಶಿಂಗ್ಟನ್, ಜು.12: ಹಾರ್ಮುಝ್ ಜಲಮಾರ್ಗವು ಕಾನೂನುಬದ್ಧವಾಗಿ ಸಂಚರಿಸಲು ಬಯಸುವ ಎಲ್ಲಾ ಹಡಗುಗಳಿಗೂ ಮುಕ್ತವಾಗಿದ್ದು ಜಲಸಂಧಿಯ ಮೂಲಕ ಸಂಚಾರವು ಸುಗಮವಾಗಿ ಸಾಗುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರತಿಪಾದಿಸಿದೆ.

`ಇರಾನ್‍ನ ಅನಗತ್ಯ ಆಕ್ರಮಣಶೀಲತೆ, ಕಿರುಕುಳ, ಬೆದರಿಕೆಗಳು ಮತ್ತು ನಿರಂಕುಶ ಘೋಷಣೆಗಳ ಹೊರತಾಗಿಯೂ, ನೌಕಾಯಾನದ ಸ್ವಾತಂತ್ರ್ಯವು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಡೆಗಳು ಸನ್ನದ್ಧವಾಗಿವೆ. ಇರಾನ್ ಈ ಜಲಸಂಧಿಯ ಮೇಲೆ ನಿಯಂತ್ರಣ ಹೊಂದಿಲ್ಲ ಮತ್ತು ಮುಕ್ತ ಸಂಚಾರದ ಮಾರ್ಗಗಳು ತೆರೆದೇ ಇವೆ' ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News