Syria | ರಾಜಭವನವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ
Photo Credit : aljazeera.com
ಡಮಾಸ್ಕಸ್: ರಾಜ್ಯಪಾಲರು ಸುದ್ದಿಗೋಷ್ಠಿ ನಡೆಸುತ್ತಿದ್ದ ಅಲೆಪ್ಪೊದಲ್ಲಿನ ರಾಜಭವನವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ.
ಸಿರಿಯಾ ಸೇನೆಯು ಅಲೆಪ್ಪೊದ ಶೇಖ್ ಮಕ್ಸೂದ್ ಜಿಲ್ಲೆಯಲ್ಲಿ ನಡೆಸುತ್ತಿರುವ ಎಲ್ಲ ಸೇನಾ ಚಟುವಟಿಕೆಗಳನ್ನು ಅಮಾನತುಗೊಳಿಸಿ, ಕುರ್ದಿಶ್ ನೇತೃತ್ವದ ಎಸ್‌ಡಿಎಫ್ ಬಂಡುಕೋರರನ್ನು ತಬ್ಕಾಗೆ ಉಚ್ಚಾಟಿಸಲಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಲೆಪ್ಪೊ ನಗರದ ಅಶ್ರಫಿಯೆ ಮತ್ತು ಶೇಖ್ ಮಕ್ಸೂದ್ ನೆರೆಹೊರೆಯಲ್ಲಿ ನಡೆಯುತ್ತಿರುವ ಕಾಳಗದಿಂದಾಗಿ ಕನಿಷ್ಠ ಪಕ್ಷ 1,80,000 ಮಂದಿ ನಗರದಿಂದ ಪರಾರಿಯಾಗಿದ್ದಾರೆ.
ಎಸ್‌ಡಿಎಫ್ ಬಂಡುಕೋರರು ಕನಿಷ್ಠ ಮೂವರು ಯೋಧರನ್ನು ಹತ್ಯೆಗೈದಿದ್ದಾರೆ ಎಂದು ಸಿರಿಯಾ ಸೇನೆ ಹೇಳಿದೆ. ಸಿರಿಯಾ ಸರಕಾರದೊಂದಿಗೆ ಸೇರಿಕೊಂಡಿರುವ ಬಣಗಳು ಫಿರಂಗಿ ದಾಳಿ ನಡೆಸುತ್ತಿದ್ದು, ಈ ದಾಳಿಯಲ್ಲಿ ಪೂರ್ವ ಅಲೆಪ್ಪೊದ ಡೈರ್ ಹಾಫರ್‌ನಲ್ಲಿ ಒಬ್ಬ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಎಸ್‌ಡಿಎಫ್ ಆರೋಪಿಸಿದೆ.
ಮಂಗಳವಾರದಿಂದ ಹಿಂಸಾಚಾರ ಸ್ಫೋಟಗೊಂಡಾಗಿನಿಂದ ನಾಗರಿಕರು ಸೇರಿ ಕನಿಷ್ಠ ಪಕ್ಷ 22 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.