ಗ್ರೀನ್‍ಲ್ಯಾಂಡ್ ರಕ್ಷಣೆ ಅಮೆರಿಕದಿಂದ ಮಾತ್ರ ಸಾಧ್ಯ: ಟ್ರಂಪ್ ಹೇಳಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಜ.10: ಗ್ರೀನ್‍ಲ್ಯಾಂಡ್ ನಲ್ಲಿ ಹೆಚ್ಚುತ್ತಿರುವ ರಶ್ಯ ಮತ್ತು ಚೀನಾದ ಪ್ರಭಾವಕ್ಕೆ ತಡೆಯೊಡ್ಡಲು ಆ ಪ್ರದೇಶವನ್ನು ನಿಯಂತ್ರಣಕ್ಕೆ ಪಡೆಯಲು ಅಮೆರಿಕ ಉದ್ದೇಶಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಪ್ರದೇಶಗಳನ್ನು ರಕ್ಷಿಸಲು ಅದರ ಮಾಲಿಕತ್ವ ಹೊಂದಿರಬೇಕು. ಭೋಗ್ಯಕ್ಕೆ ಪಡೆದ ಪ್ರದೇಶಗಳನ್ನು ನೀವು ರಕ್ಷಿಸಬೇಕಿಲ್ಲ. ಆದ್ದರಿಂದ ಗ್ರೀನ್‍ಲ್ಯಾಂಡ್ ಅನ್ನು ರಕ್ಷಿಸಲು ಅದರ ಮಾಲಿಕತ್ವವನ್ನು ಪಡೆಯಲು ಅಮೆರಿಕಾ ಬಯಸುತ್ತದೆ. ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಗ್ರೀನ್‍ಲ್ಯಾಂಡ್ ಅತ್ಯಗತ್ಯ. ಗ್ರೀನ್‍ಲ್ಯಾಂಡ್‍ನಾದ್ಯಂತ ಈಗ ರಶ್ಯ ಮತ್ತು ಚೀನಾದ ಹಡಗುಗಳು ತುಂಬಿವೆ. ಅದನ್ನು ಚೀನಾ ಮತ್ತು ರಶ್ಯ ನಿಯಂತ್ರಣಕ್ಕೆ ಪಡೆಯುವುದನ್ನು ನಾವು ತಡೆಯಬೇಕಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಪ್ರತಿಪಾದಿಸಿದ್ದಾರೆ.
ಗ್ರೀನ್‍ಲ್ಯಾಂಡ್ ಮಾರಾಟಕ್ಕಿಲ್ಲ ಎಂದು ಡೆನ್ಮಾರ್ಕ್ ಮತ್ತು ಗ್ರೀನ್‍ಲ್ಯಾಂಡ್ ಎರಡೂ ಹೇಳಿದ್ದು, ಯಾವುದೇ ಸೈನಿಕ ಕ್ರಮವು ಅಟ್ಲಾಂಟಿಕ್ ರಕ್ಷಣಾ ಮೈತ್ರಿಯನ್ನು ಕೊನೆಗೊಳಿಸುತ್ತದೆ ಎಂದು ಡೆನ್ಮಾರ್ಕ್ ಎಚ್ಚರಿಸಿದೆ.