×
Ad

ಲಾದೆನ್ ಹತ್ಯೆ ತಂಡದಲ್ಲಿದ್ದ ಅಮೆರಿಕದ ಮಾಜಿ ಯೋಧನ ಬಂಧನ

Update: 2023-08-27 23:13 IST

ಒಸಾಮಾ ಬಿನ್ ಲಾದೆನ್‍

ಟೆಕ್ಸಾಸ್: ಒಸಾಮಾ ಬಿನ್ ಲಾದೆನ್‍ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದ ಅಮೆರಿಕ ನೌಕಾಪಡೆಯ `ಸೀಲ್' ಘಟಕದ ಮಾಜಿ ಯೋಧ ರೋಬರ್ಟ್ ಒನೀಲ್‍ನನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಟೆಕ್ಸಾಸ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಮಲುಪದಾರ್ಥ ಸೇವನೆ, ಹಲ್ಲೆ ನಡೆಸಿ ದೈಹಿಕ ಗಾಯ ಉಂಟುಮಾಡಿದ ಆರೋಪದಲ್ಲಿ ಒನೀಲ್‍ನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆದರೆ ಆರೋಪಪಟ್ಟಿಯಲ್ಲಿ ಹಲ್ಲೆ ನಡೆಸಿರುವುದನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂದು `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಪಾಕಿಸ್ತಾನದಲ್ಲಿ 2011ರಲ್ಲಿ ಅಮೆರಿಕದ ಸೇನೆ ನಡೆಸಿದ್ದ ದಾಳಿಯಲ್ಲಿ ಒಸಾಮಾ ಬಿನ್ ಲಾದೆನ್‍ನನ್ನು ಹತ್ಯೆ ಮಾಡಲಾಗಿತ್ತು. ಲಾದೆನ್‍ಗೆ ತಾನೇ ಗುಂಡಿಕ್ಕಿದ್ದಾಗಿ ಒ'ನೀಲ್ ಹೇಳಿಕೆ ನೀಡಿದ್ದು ಇದನ್ನು ಅಮೆರಿಕದ ಸೇನೆ ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News