×
Ad

ಖತರ್ ನಲ್ಲಿ ಇಸ್ರೇಲ್ ದಾಳಿಗೆ ಅಸಮಾಧಾನ ಸೂಚಿಸಿದ ಟ್ರಂಪ್: ವರದಿ

Update: 2025-09-11 22:26 IST

PC: PTI

ವಾಷಿಂಗ್ಟನ್, ಸೆ.11: ಖತರ್‍ ನೊಳಗೆ ಹಮಾಸ್ ಮೇಲೆ ದಾಳಿ ನಡೆಸುವುದು ವಿವೇಕದ ನಡೆಯಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿಗೆ ತಿಳಿಸಿದ್ದರು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ವಾಲ್‍ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

ದಾಳಿಯ ಬಳಿಕ ನೆತನ್ಯಾಹುಗೆ ಕರೆ ಮಾಡಿದ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೋಹಾದಲ್ಲಿ ನಡೆಸಿದ ದಾಳಿಯ ಬಗ್ಗೆ ಅತೃಪ್ತಿ ಸೂಚಿಸಿದರು.

ಇದಕ್ಕೆ ಉತ್ತರಿಸಿದ ನೆತನ್ಯಾಹು `ನಿಖರ ಗುಪ್ತಚರ ಮಾಹಿತಿಯನ್ನು ಆಧರಿಸಿ ಅವಕಾಶವನ್ನು ಬಳಸಿಕೊಂಡಿದ್ದು ಯಶಸ್ವಿಯಾಗಿರುವುದಾಗಿ ಪ್ರತಿಪಾದಿಸಿದರು' ಎಂದು ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News