×
Ad

ಗಾಝಾ ಶಾಂತಿ ಮಂಡಳಿ ಸೇರಲು ಮೋದಿಗೆ ಟ್ರಂಪ್ ಆಹ್ವಾನ

Update: 2026-01-18 22:40 IST

Photo Credit: ANI

ವಾಶಿಂಗ್ಟನ್, ಜ. 17: ಗಾಝಾ ಶಾಂತಿ ಮಂಡಳಿಗೆ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನಿಸಿದ್ದಾರೆ ಎಂದು ಭಾರತ ಸರಕಾರದ ಮೂಲಗಳು ರವಿವಾರ ತಿಳಿಸಿವೆ.

ಇಸ್ರೇಲ್ ಹಾಗೂ ಹಮಾಸ್ ಹೋರಾಟಗಾರರ ನಡುವಿನ ವಿನಾಶಕಾರಿ ಸಂಘರ್ಷದ ಎರಡು ವರ್ಷಗಳ ಬಳಿಕ ಗಾಝಾದ ಮರು ನಿರ್ಮಾಣ ಹಾಗೂ ಆ ಪ್ರದೇಶದಿಂದ ಸೇನೆಯನ್ನು ಹಿಂದೆಗೆದುಕೊಳ್ಳುವ ವಿಶ್ವಸಂಸ್ಥೆ ಬೆಂಬಲಿತ ಅಮೆರಿಕದ ಯೋಜನೆಯ ಭಾಗವಾಗಿ ಈ ಮಂಡಳಿಯನ್ನು ರೂಪಿಸಲಾಗಿದೆ.

ಟ್ರಂಪ್ ಅವರು ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಪ್ರಧಾನಿ ಮೋದಿ ಅವರು ಈ ಆಹ್ವಾನವನ್ನು ಸ್ವೀಕರಿಸಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News