×
Ad

ಗಾಝಾ ಸಲಹಾ ಸಮಿತಿಗೆ ಇಸ್ರೇಲ್ ಪ್ರಧಾನಿ ಆಕ್ಷೇಪ

Update: 2026-01-18 23:01 IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು|PC: PTI

ಜೆರುಸಲೇಂ, ಜ.18: ಶ್ವೇತಭವನವು ರಚಿಸಿದ ಗಾಝಾ ಸಲಹಾ ಸಮಿತಿಯ ಸಂಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ಷೇಪಿಸಿದ್ದು ಈ ಬಗ್ಗೆ ಚರ್ಚಿಸಲು ಆಡಳಿತಾರೂಢ ಮೈತ್ರಿಪಕ್ಷದ ಸಭೆ ಕರೆದಿರುವುದಾಗಿ ವರದಿಯಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯ `ಶಾಂತಿ ಮಂಡಳಿಯ' ಅಡಿಯಲ್ಲಿ ಕಾರ್ಯನಿರ್ವಹಿಸುವ ಗಾಝಾ ಕಾರ್ಯಕಾರಿ ಮಂಡಳಿಯ ರಚನೆಯನ್ನು ಈ ವಾರ ಶ್ವೇತಭವನ ಘೋಷಿಸಿದೆ. ಸಲಹೆಗಾರನ ಪಾತ್ರ ನಿರ್ವಹಿಸುವ ಕಾರ್ಯಕಾರಿ ಮಂಡಳಿಯಲ್ಲಿ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್ ಮತ್ತು ಖತರ್ ರಾಜತಾಂತ್ರಿಕ ಅಲಿ ಅಲ್-ಥವಾದಿ ಸೇರಿದಂತೆ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಅಧಿಕಾರಿಗಳನ್ನು ಹೆಸರಿಸಲಾಗಿದೆ.

ಕಾರ್ಯಕಾರಿ ಮಂಡಳಿ ರಚನೆಗೆ ಇಸ್ರೇಲ್ ಪ್ರಧಾನಿಯ ಕಚೇರಿ ಆಕ್ಷೇಪ ವ್ಯಕ್ತಪಡಿಸಿದ್ದು `ಇದು ಇಸ್ರೇಲ್‍ನ ನೀತಿಗೆ ವಿರುದ್ಧವಾಗಿ ಸಾಗುತ್ತದೆ. ಈ ವಿಷಯದ ಬಗ್ಗೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ವಿದೇಶಾಂಗ ಸಚಿವರಿಗೆ ಸೂಚಿಸಲಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News