ಚಿಲಿಯಲ್ಲಿ ತೀವ್ರಗೊಂಡ ಕಾಡ್ಗಿಚ್ಚು: 20,000 ಜನರ ಸ್ಥಳಾಂತರ
Update: 2026-01-18 23:19 IST
ಸ್ಯಾಂಟಿಯಾಗೊ, ಜ.18: ಚಿಲಿಯಲ್ಲಿ ಕಾಡ್ಗಿಚ್ಚು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಎರಡು ದಕ್ಷಿಣ ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು ಸುಮಾರು 20 ಸಾವಿರ ಜನರನ್ನು ಸ್ಥಳಾಂತರಿಸಿರುವುದಾಗಿ ಚಿಲಿ ಅಧ್ಯಕ್ಷ ಗ್ಯಾಬ್ರಿಯೆಲ್ ಬೋರಿಕ್ ಹೇಳಿದ್ದಾರೆ.
ನುಬಲ್ ಮತ್ತು ಬಯೊಬಿಯೊ ಪ್ರದೇಶಗಳಲ್ಲಿ 12 ಕಡೆಗಳಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದ್ದು ಇಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದೆ.