×
Ad

ʼಒಪ್ಪಂದ ಅಥವಾ ವಿನಾಶʼ: ಇರಾನ್‍ಗೆ ಎರಡು ಆಯ್ಕೆಗಳಿವೆ ಎಂದ ಟ್ರಂಪ್

Update: 2026-05-15 21:22 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್: ಮುಂದುವರಿದಿರುವ ಬಿಕ್ಕಟ್ಟನ್ನು ಕೊನೆಗೊಳಿಸುವ ಒಪ್ಪಂದ ಮಾಡಿಕೊಳ್ಳುವುದು ಅಥವಾ ವಿನಾಶವನ್ನು ಎದುರಿಸುವುದು- ಈ ಎರಡರಲ್ಲಿ ಒಂದನ್ನು ಇರಾನ್ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಇರಾನ್‍ನ ಕಥೆ ಮುಗಿದಿದೆ. ಅವರ ನೌಕಾಪಡೆ ನಾಶಗೊಂಡಿದೆ ಮತ್ತು ಅವರು ಪರಿಣಾಮಕಾರಿ ವಾಯುಪಡೆ ಮತ್ತು ವಿಮಾನ ನಿರೋಧಕ ಸಾಮಥ್ರ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಒಪ್ಪಂದ ಮಾಡಿಕೊಳ್ಳದಿದ್ದರೆ ಅವರು ನಾಶವಾಗುತ್ತಾರೆ. ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ಆಗಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೂ ಬಯಸಿದ್ದಾರೆ. ಇರಾನ್‍ಗೆ ಮಿಲಿಟರಿ ಸಾಧನಗಳನ್ನು ಚೀನಾ ನೀಡುವುದಿಲ್ಲ ಎಂದು ಜಿಂಪಿಂಗ್ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News