×
Ad

ಹಾರ್ಮುಝ್ ಬೈಪಾಸ್ ಮಾಡುವ ಯುಎಇ ಪೈಪ್‍ಲೈನ್ ಯೋಜನೆ ಪ್ರಗತಿಯಲ್ಲಿ

Update: 2026-05-15 21:30 IST

Photo Credit : X 

ಅಬುಧಾಬಿ: ಫುಜೈರಾ ಬಂದರಿನ ಮೂಲಕ ಕಚ್ಛಾತೈಲ ರಫ್ತು ಮಾಡುವ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ಉದ್ದೇಶದ ಪ್ರಮುಖ ತೈಲ ಪೈಪ್‍ಲೈನ್ ಯೋಜನೆಯನ್ನು ತ್ವರಿತಗೊಳಿಸುವುದಾಗಿ ಯುಎಇ ಶುಕ್ರವಾರ ಘೋಷಿಸಿದೆ.

ಇರಾನ್-ಅಮೆರಿಕ ಮತ್ತು ಇಸ್ರೇಲ್ ಯುದ್ಧದಿಂದಾಗಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ಮಧ್ಯೆ ಹಾರ್ಮುಝ್ ಜಲಸಂಧಿಯನ್ನು ಬೈಪಾಸ್ ಮಾಡುವ ಮೂಲಕ ಹಾರ್ಮುಝ್ ಮೇಲಿನ ಅವಲಂಬನೆ ಕಡಿಮೆಗೊಳಿಸುವ ಉದ್ದೇಶದ `ವೆಸ್ಟ್-ಈಸ್ಟ್ ಪೈಪ್‍ಲೈನ್' ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈಗ ನಿರ್ಮಾಣ ಹಂತದಲ್ಲಿರುವ ಪೈಪ್‍ಲೈನ್ 2027ರಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಯುಎಇ ಈಗ `ಅಬುಧಾಬಿ ಕಚ್ಛಾತೈಲ ಪೈಪ್‍ಲೈನ್' ಅನ್ನು ನಿರ್ವಹಿಸುತ್ತಿದ್ದು ಇದು ಹಾರ್ಮುಝ್ ಜಲಸಂಧಿಯನ್ನು ಬೈಪಾಸ್ ಮಾಡುವ ಮೂಲಕ ದಿನಕ್ಕೆ 1.8 ದಶಲಕ್ಷ ಬ್ಯಾರೆಲ್‍ಗಳಷ್ಟು ಕಚ್ಛಾತೈಲವನ್ನು ನೇರವಾಗಿ ಒಮಾನ್ ಕರಾವಳಿಗೆ ಸಾಗಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News