×
Ad

ಟ್ರಂಪ್ ಘೋಷಿಸಿರುವ ಪೌರತ್ವ ನೀತಿ | ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ 10 ಲಕ್ಷಕ್ಕಿಂತಲೂ ಹೆಚ್ಚಿನ ಭಾರತೀಯರ ಭವಿಷ್ಯ ತೂಗುಯ್ಯಾಲೆಯಲ್ಲಿ

Update: 2025-01-21 23:42 IST

Photo : Reuters

ವಾಶಿಂಗ್ಟನ್ : 'ಅಮೆರಿಕದ ಪೌರತ್ವದ ಅರ್ಥ ಮತ್ತು ಮೌಲ್ಯವನ್ನು ರಕ್ಷಿಸುವುದು' ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶ ಭಾರತೀಯ ವಲಸಿಗರನ್ನು ದಿಗ್ಭ್ರಮೆಗೊಳಿಸಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಟ್ರಂಪ್ 'ಹುಟ್ಟಿನಿಂದ ಪೌರತ್ವ' ಎಂಬ ಘೋಷಣೆ ಮಾಡಿದ್ದು ಅಕ್ರಮ ವಲಸಿಗರ ಮಕ್ಕಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ಹಲವರು ನಂಬಿದ್ದರು. H-1B ಹೊಂದಿರುವವರು ಅಥವಾ L ಇಂಟ್ರಾ-ಕಂಪೆನಿ ವೀಸಾ ಅಥವಾ F ವಿದ್ಯಾರ್ಥಿ ವೀಸಾ, ಅಲ್ಲದೇ ಕೆಲಸದ ವೀಸಾಗಳಲ್ಲಿರುವವರು ಸೇರಿದಂತೆ ಕಾನೂನುಬದ್ಧ ವಲಸಿಗರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಲವಾರು ಭಾರತೀಯ ಕುಟುಂಬಗಳು ಭಾವಿಸಿದ್ದವು. ಈಗ ಟ್ರಂಪ್ ಅವರ ಆದೇಶ ಅವರಿಗೆಲ್ಲ ಅಚ್ಚರಿ ತಂದಿದೆ.

ಅಧ್ಯಕ್ಷ ಟ್ರಂಪ್ ಘೋಷಿಸಿರುವ ಪೌರತ್ವ ಆದೇಶವು ಉದ್ಯೋಗ-ಸಂಬಂಧಿತ ಗ್ರೀನ್ ಕಾರ್ಡ್‌ಗಾಗಿ ದಶಕಗಳಿಂದ ಸರತಿ ಸಾಲಿನಲ್ಲಿ ಕಾಯುತ್ತಿರುವ 10 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ನೂತನ ನೀತಿಯಂತೆ ಅಮೆರಿಕ ಪ್ರಜೆಯಲ್ಲದವರು ಗ್ರೀನ್ ಕಾರ್ಡ್ ಹೊಂದಿದ್ದ ಮಾತ್ರಕ್ಕೆ ಅವರ ಮಗು ಸಲೀಸಾಗಿ ಅಮೆರಿಕದ ಪೌರತ್ವವನ್ನು ಪಡೆಯುವುದಿಲ್ಲ.

ಪ್ಯೂ ರಿಸರ್ಚ್ ನಡೆಸಿದ US ಜನಗಣತಿ 2022 ವಿಶ್ಲೇಷಣೆಯ ಪ್ರಕಾರ, ಅಮೆರಿಕದಲ್ಲಿ ಸುಮಾರು 48 ಲಕ್ಷ ಭಾರತೀಯ ಅಮೆರಿಕನ್ನರಿದ್ದಾರೆ. ಅವರಲ್ಲಿ 34% ಅಥವಾ 16 ಲಕ್ಷ ಮಂದಿ ಅಮೆರಿಕದಲ್ಲಿ ಜನಿಸಿದರು. ಅವರೆಲ್ಲ ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಪಡೆದಿದ್ದಾರೆ.

ನೂತನ ಕಾನೂನಿನಂತೆ ಪ್ರಸಕ್ತ ಅಮೆರಿಕದಲ್ಲಿ ಜನಿಸದ ಮಕ್ಕಳು ಮತ್ತು ಅವರ ಕುಟುಂಬಗಳು, ದಶಕಗಳ ಕಾಲ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವವರ ಮಕ್ಕಳು, 21 ವರ್ಷ ತುಂಬಿದಾಗ ಸ್ವಯಂ ಗಡೀಪಾರಾಗಬೇಕಾಗುತ್ತದೆ. ಅಥವಾ ಮತ್ತೊಂದು ವೀಸಾವನ್ನು ಆರಿಸಬೇಕಾಗುತ್ತದೆ. ಟ್ರಂಪ್ ಅವರ ಆದೇಶದನ್ವಯ ಅಮೆರಿಕದಲ್ಲಿ ಜನಿಸದ ಎಲ್ಲರಿಗೂ ಸಾರ್ವತ್ರಿಕ ಪೌರತ್ವವನ್ನು ವಿಸ್ತರಿಸಲು ಎಂದಿಗೂ ಅವಕಾಶವಿಲ್ಲ ಎಂದು ಉಲ್ಲೇಖಿಸಲಾಗಿದೆ.

ಸೌಜನ್ಯ: timesofindia

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News