×
Ad

ಅಮೆರಿಕದಲ್ಲಿ ಶೂಟೌಟ್ ಇಬ್ಬರು ಮೃತ್ಯು; 28 ಮಂದಿಗೆ ಗಾಯ

Update: 2023-07-02 23:09 IST

ನ್ಯೂಯಾರ್ಕ್: ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ರವಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ಇತರ 28 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಶನಿವಾರ ರಾತ್ರಿ 12:30ರ ವೇಳೆಗೆ ನಗರದ ದಕ್ಷಿಣದಲ್ಲಿರುವ ಬ್ರೂಕ್ಲಿನ್ ಹೋಮ್ಸ್ ಎಂಬಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಗಲಭೆ ಆರಂಭವಾಗಿದೆ. ಆ ಸಂದರ್ಭ ಸ್ಥಳದಲ್ಲಿ ಸುಮಾರು 30 ಮಂದಿಯಿದ್ದರು. ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವ್ಯಕ್ತಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಇತರ 28 ಮಂದಿ ಗಾಯಗೊಂಡಿದ್ದು ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಬಾಲ್ಟಿಮೋರ್ ಪೊಲೀಸ್ ಇಲಾಖೆಯ ಉಸ್ತುವಾರಿ ಕಮಿಷನರ್ ರಿಚರ್ಡ್ ವೊರ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News