×
Ad

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ | ಇರಾನ್ ಮೇಲೆ ಅಮೆರಿಕದಿಂದ ದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಸರಕು ಹಡಗಿನ ಮೇಲೆ ಇರಾನ್‌ ದಾಳಿ ಬೆನ್ನಲ್ಲೆ ಬೆಳವಣಿಗೆ

Update: 2026-06-27 10:00 IST

ಸಾಂದರ್ಭಿಕ ಚಿತ್ರ (X/@RT_India_news)

ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿದೆ.

ಟ್ರಂಪ್ ಆಡಳಿತವು ಈ ಹಿಂದೆ ನಡೆಸಿದ್ದ ದಾಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕದ ಪಡೆಗಳನ್ನು ನಿಯೋಜಿಸಲಾಗಿದ್ದ  ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿದೆ. ಈ ದಾಳಿಯೊಂದಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಇದೇ ವೇಳೆ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಇಸ್ರೇಲ್ ಮತ್ತು ಲೆಬನಾನ್ ನಡುವೆ 'ಚೌಕಟ್ಟು ಒಪ್ಪಂದ'ಕ್ಕೆ ಸಹಿ ಹಾಕಲಾಗಿದೆ ಎಂದು ವಾಷಿಂಗ್ಟನ್ ಘೋಷಿಸಿದೆ. ದಶಕಗಳಿಂದ ಮುಂದುವರಿದಿರುವ 'ಅಂತ್ಯವಿಲ್ಲದ ಸಂಘರ್ಷದ ಚಕ್ರ'ವನ್ನು ಕೊನೆಗೊಳಿಸುವ ಉದ್ದೇಶದಿಂದ ಈ ಒಪ್ಪಂದವನ್ನು ರೂಪಿಸಲಾಗಿದೆ ಎಂದು ಅಮೆರಿಕ ಆಡಳಿತ ಹೇಳಿದೆ.

ಆದರೆ, ಲೆಬನಾನ್‌ನ ಹಿಜ್ಬುಲ್ಲಾ ಈ ಒಪ್ಪಂದವನ್ನು ತಿರಸ್ಕರಿಸಿದೆ. ಈ ಒಪ್ಪಂದವು ಇಸ್ರೇಲ್‌ನ 'ಹಿತಾಸಕ್ತಿಗಳನ್ನು' ಮಾತ್ರ ಪೂರೈಸುವಂತಿದ್ದು, ಲೆಬನಾನ್‌ನ ಹಿತಾಸಕ್ತಿಗಳನ್ನು ಕಡೆಗಣಿಸುತ್ತದೆ ಎಂದು ಹಿಜ್ಬುಲ್ಲಾ ಹೇಳಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News