ಅಮೆರಿಕದ ಶಸ್ತ್ರಾಸ್ತ್ರಗಳನ್ನು ಮಾನವೀಯ ಕಾನೂನು ಉಲ್ಲಂಘಿಸಲು ಬಳಸುವುದಿಲ್ಲ : ಇಸ್ರೇಲ್ ಭರವಸೆ
Update: 2024-03-21 22:32 IST
Photo : PTI
ವಾಶಿಂಗ್ಟನ್, ಮಾ.21: ಅಮೆರಿಕ ಒದಗಿಸಿರುವ ಶಸ್ತ್ರಾಸ್ತ್ರಗಳನ್ನು ಗಾಝಾದಲ್ಲಿ ಮಾನವೀಯ ಕಾನೂನು ಉಲ್ಲಂಘನೆಗೆ ಬಳಸುವುದಿಲ್ಲ ಎಂದು ಇಸ್ರೇಲ್ ಲಿಖಿತ ಭರವಸೆ ನೀಡಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲ್ ಈ ಭರವಸೆಯನ್ನು ಪಾಲಿಸುತ್ತಿದೆಯೇ ಎಂದು ಅಮೆರಿಕದ ವಿದೇಶಾಂಗ ಇಲಾಖೆಗೆ ಮೇ ತಿಂಗಳೊಳಗೆ ಮೌಲ್ಯಮಾಪನ ಮಾಡಿ ಅಮೆರಿಕ ಸಂಸತ್ಗೆ ವರದಿ ನೀಡಲಿದೆ.
ಅಮೆರಿಕದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿರುವ ದೇಶಗಳು ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಬೇಕು ಎಂಬ ಹೊಸ ರಾಷ್ಟ್ರೀಯ ಭದ್ರತಾ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಳೆದ ತಿಂಗಳು ಜಾರಿಗೊಳಿಸಿದ್ದರು.