×
Ad

ವೈದ್ಯೆಯರೊಂದಿಗೆ ಅಶ್ಲೀಲ ವರ್ತನೆ ಆರೋಪ: ಭಾರತ ಮೂಲದ ವ್ಯಕ್ತಿ ಕೆನಡಾದಲ್ಲಿ ಬಂಧನ

Update: 2025-12-11 07:44 IST

PC: x.com/NDTVWORLD

ಒಟ್ಟಾವ: ಕೆನಡಾದ ಮಿಸ್ಸಿಸೌಗಾ ಆಸ್ಪತ್ರೆಗಳಲ್ಲಿ ವೈದ್ಯೆಯರು ಸೇರಿದಂತೆ ಮಹಿಳಾ ಉದ್ಯೋಗಿಗಳ ಜತೆ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸಿದ ಆರೋಪದಲ್ಲಿ 25 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ವೈಭವ್ ಎಂದು ಗುರುತಿಸಲಾಗಿದ್ದು, ವೈದ್ಯಕೀಯ ಸಮಸ್ಯೆಗಳಿವೆ ಎಂಬ ನೆಪದಲ್ಲಿ ಪದೇ ಪದೇ ಕ್ಲಿನಿಕ್ ಗಳಿಗೆ ಭೇಟಿ ನೀಡಿ, ಮಹಿಳಾ ವೈದ್ಯರಿಂದ ಅಸಭ್ಯ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 2025ರ ಹಲವು ತಿಂಗಳಲ್ಲಿ ಹಲವು ಕಡೆಗಳಲ್ಲಿ ಇಂಥ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ.

"ಅಸಭ್ಯ ವರ್ತನೆಗಾಗಿ ಬ್ರಾಂಪ್ಟನ್ ನ ವ್ಯಕ್ತಿಯನ್ನು 12 ಡಿವಿಷನ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೊ ಬಂಧಿಸಿದೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆಲ ಪ್ರಕರಣಗಳಲ್ಲಿ ಮಹಿಳಾ ಕ್ಲಿನಿಕ್ ಸಿಬ್ಬಂದಿಯ ಬಳಿಗೂ ತೆರಳಿದ್ದ ಎಂದು ಪೊಲೀಸರು ಹೇಳಿದ್ದು, ವೈದ್ಯರ ಬಳಿ ಮಾತನಾಡುವಾಗ ಸುಳ್ಳು ಗುರುತು ಹೇಳುತ್ತಿದ್ದ. ಅಸ್ವಸ್ಥತೆಯ ಬಗ್ಗೆ ಸುಳ್ಳು ಮಾಹಿತಿ ನೀಡಿ, ವೈದ್ಯೆಯರು ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಬೇಕು ಎಂದು ಬಯಸುತ್ತಿದ್ದ. ಕೆಲ ಪ್ರಕರಣಗಳಲ್ಲಿ ಆಕಾಶ್ದೀಪ್ ಸಿಂಗ್ ಎಂದು ಹೇಳಿಕೊಂಡಿದ್ದಾಗಿ ಪ್ರಕಟಣೆ ವಿರಿಸಿದೆ.

ಡಿಸೆಂಬರ್ 4ರಂದು ಈತನನ್ನು ಬಂಧಿಸಲಾಗಿದ್ದು, ಈತನ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈತನ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ, ಪ್ರಯೋಜನ ಪಡೆಯುವ ಸಲುವಾಗಿ ವಂಚನೆ, ಐಡೆಂಟಿಟಿ ಕಳ್ಳತನದ ಆರೋಪವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News