×
Ad

ವೆನೆಝುವೆಲ ಅಧ್ಯಕ್ಷೆ ಭಾರೀ ಬೆಲೆ ತೆರಬೇಕಾಗಬಹುದು: ಟ್ರಂಪ್ ಬೆದರಿಕೆ

Update: 2026-01-09 22:42 IST

photo:PTI

ಅಮೆರಿಕವು ವೆನೆಝುವೆಲವನ್ನು ಆಳುವುದು ಮತ್ತು ಅಲ್ಲಿನ ಬೃಹತ್ ತೈಲ ನಿಕ್ಷೇಪಗಳನ್ನು ಬಳಸುವುದು ಎಂದು ಮಡುರೊ ಅಪಹರಣದ ಬಳಿಕ ಟ್ರಂಪ್ ಹೇಳಿದ್ದರು. ಆದರೆ, ವೆನೆಝುವೆಲದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್‌ಗೆ ಸಹಕಾರ ನೀಡಲಾಗುವುದು ಎಂದು ಅಮೆರಿಕ ಸರಕಾರ ಬಳಿಕ ಹೇಳಿತು.

ಆದರೂ, ಮಧ್ಯಂತರ ಸರಕಾರದ ನೀತಿಯನ್ನು ತಾನು ರೂಪಿಸುವುದಾಗಿ ಟ್ರಂಪ್ ಆಡಳಿತ ಹೇಳಿದೆ ಹಾಗೂ ಅಮೆರಿಕದ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಎರಡನೇ ಹಂತದ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಬೆದರಿಕೆಯನ್ನು ಅದು ಪದೇ ಪದೇ ಒಡ್ಡಿದೆ.

‘‘ಸರಿಯಾದುದನ್ನು ಅವರು (ವೆನೆಝುವೆಲದ ಮಧ್ಯಂತರ ಅಧ್ಯಕ್ಷೆ) ಮಾಡದಿದ್ದರೆ, ಅವರು ಭಾರೀ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಬಹುಷಃ ಅದು ಮಡೊರೊ ತೆತ್ತ ಬೆಲೆಗಿಂತಲು ಹೆಚ್ಚಾಗಬಹುದು’’ ಎಂದು ‘ದ ಅಟ್ಲಾಂಟಿಕ್’ನ ರವಿವಾರದ ಸಂಚಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News