ಐಸನ್‍ಕೋಟ್ ಅವರೊಂದಿಗೆ ಕೈಜೋಡಿಸಲು ಸಿದ್ಧ: ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು (Photo: PTI)
ಟೆಲ್ ಅವೀವ್: ಯಶಾರ್ ಪಕ್ಷದ ನಾಯಕ ಗಾಡಿ ಐಸನ್‍ಕೋಟ್ ತಮ್ಮ ನೇತೃತ್ವದ ಸರಕಾರಕ್ಕೆ ನಿರ್ಗಮಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷವನ್ನು ಸ್ವಾಗತಿಸುವುದಾಗಿ ಹೇಳಿದ ಮರುದಿನವೇ, ನೆತನ್ಯಾಹು ಈ ಪ್ರಸ್ತಾವನೆಯನ್ನು ಸ್ವೀಕರಿಸುವ ಸುಳಿವು ನೀಡಿದ್ದಾರೆ.
ವ್ಯಾಪಕವಾದ ಸರಕಾರವನ್ನು ರಚಿಸುವ ಸಾಧ್ಯತೆಯನ್ನು ಪರಿಶೀಲಿಸಲು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸಿದ್ಧರಿರುವುದಾಗಿ ನೆತನ್ಯಾಹು ತಿಳಿಸಿದ್ದಾರೆ.