Photo Credit: indiatoday

ಲಂಡನ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಹಾಗೂ ಇತರ ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಬ್ರಿಟಿಷ್ ಕಮೆಡಿಯನ್ ಮತ್ತು ನಟ ರಸೆಲ್ ಬ್ರ್ಯಾಂಡ್ ಅವರನ್ನು ದೋಷಿ ಎಂದು ಘೋಷಿಸಲಾಗಿದ್ದು, ಹತ್ತೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

2004ರಿಂದ 2009ರ ನಡುವಿನ ಅವಧಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ 51 ವರ್ಷದ ರಸೆಲ್ ಬ್ರ್ಯಾಂಡ್ ವಿರುದ್ಧ ಆರೋಪ ಹೊರಿಸಲಾಗಿತ್ತು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ನ ಸೌತ್ವಾರ್ಕ್ ಕ್ರೌನ್ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿತು.

ಒಂದು ಕಾಲದಲ್ಲಿ ಬ್ರಿಟನ್ ನ ಜನಪ್ರಿಯ ನಿರೂಪಕರಾಗಿದ್ದ ಹಾಗೂ ಹಾಲಿವುಡ್ ತಾರೆಯಾಗಿದ್ದ ರಸೆಲ್ ಬ್ರ್ಯಾಂಡ್ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಜೋಯೆಲ್ ಬೆನ್ನಾಥನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ನಿಮ್ಮ ಖ್ಯಾತಿಯ ಬಲದಿಂದ ನಿಮಗೆ ಬೇಕಾದಂತೆ, ನಿಮಗೆ ಇಷ್ಟ ಬಂದಾಗಲೆಲ್ಲ ನಡೆದುಕೊಳ್ಳಬಹುದು ಎಂದು ನೀವು ಭಾವಿಸಿದ್ದೀರಿ. ನಿಮ್ಮ ವರ್ತನೆ ಸರಿಯಿರಲಿಲ್ಲ”, ಎಂದು ನ್ಯಾಯಮೂರ್ತಿಗಳು ರಸೆಲ್ ಬ್ರ್ಯಾಂಡ್ ಅವರನ್ನು ತರಾಟೆಗೆ ತೆಗೆದುಕೊಂಡರು.

ರಸೆಲ್ ಬ್ರ್ಯಾಂಡ್ ಗೆ ಶಿಕ್ಷೆ ವಿಧಿಸುವುದಕ್ಕೂ ಮುನ್ನ, 2009ರಲ್ಲಿ ಅವರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರು ಅನುಭವಿಸುತ್ತಿರುವ ದೀರ್ಘಕಾಲೀನ ಪರಿಣಾಮಗಳ ಕುರಿತು ಪ್ರಾಸಿಕ್ಯೂಟರ್ ಗಳು ನ್ಯಾಯಾಲಯಕ್ಕೆ ಹೇಳಿಕೆ ತಿಳಿಸಿದರು. "ಈ ಆಘಾತವನ್ನು ನಾನು ಪ್ರತಿದಿನವೂ ಹೊತ್ತುಕೊಂಡು ಬದುಕುತ್ತಿದ್ದೇನೆ. ಅದು ಎಂದಿಗೂ ಅಂತ್ಯವಾಗುವುದಿಲ್ಲ ಎಂಬ ಭಾವನೆ ಪದೇ ಪದೇ ಮೂಡುತ್ತದೆ" ಎಂದು ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor