ಕಲಬುರಗಿ: ಪ್ರಹಾರ ಜನಶಕ್ತಿ ಪಾರ್ಟಿ ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆ
Update: 2025-11-01 11:12 IST
ಕಲಬುರಗಿ: ಪ್ರಹಾರ ಜನಶಕ್ತಿ ಪಾರ್ಟಿ ಕಲಬುರ್ಗಿ ಜಿಲ್ಲಾ ಘಟಕದ ವತಿಯಿಂದ ನಾಟಕಕಾರ,ಕವಿ, ಜನಪದ ಕಲಾವಿದ ಹಣಮಂತ ಮಂಗಾಣಿ ಅವರ ಕನ್ನಡ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ನಗರದ ಸರಾಫ್ ಬಝಾರ್ ಹತ್ತಿರವಿರುವ ಪಕ್ಷದ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಹಾರ ಜನಸಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಮಧುಕರ ನಾಗಭೂಜಂಗೆ, ಕಲಬುರ್ಗಿ ನಗರಾಧ್ಯಕ್ಷ ಹಣಮಂತ ಪೂಜಾರಿ, ಜಿಲ್ಲಾ ಉಸ್ತುವಾರಿ ಗೌತಮ ಕಾಳೆ, ಪ್ರಧಾನ ಕಾರ್ಯದರ್ಶಿ ಗುಡುಸಾಬ ಮುತ್ತಾಲಿ, ರೈತ ಮೋರ್ಚಾ ಅಧ್ಯಕ್ಷ ಪರಮೇಶ್ವರ್ ಸ್ವಾಮಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲ್ಮಾನ್ ರೋಜಾ, ಕಾರ್ಯಕರ್ತರಾದ ಅಶೋಕ್ ಬೊಮ್ಮನಹಳ್ಳಿ ರಾಜು ಪಾಟೀಲ ಮತ್ತು ಇನ್ನಿತರ ಮುಖಂಡರು ಹಾಜರಿದ್ದರು.