×
Ad

Afzalpur | ಕರ್ನಾಟಕ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ

Update: 2026-07-08 20:24 IST

ಅಫಜಲಪುರ: ರಾಜ್ಯದಲ್ಲಿ ರಜಪೂತ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ಕರ್ನಾಟಕ ರಜಪೂತ ಅಭಿವೃದ್ಧಿ ಮಂಡಳಿಯನ್ನು ತಕ್ಷಣ ಸ್ಥಾಪಿಸಬೇಕು ಎಂದು ಅಫಜಲಪೂರ ತಾಲೂಕು ರಜಪೂತ ಸಮಾಜದ ಮುಖಂಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ, ರಜಪೂತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ರಚಿಸುವುದರ ಜೊತೆಗೆ, ಶೌರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿರುವ ಮಹಾರಾಣಾ ಪ್ರತಾಪಸಿಂಹ ಅವರ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಅಫಜಲಪೂರ ಪಟ್ಟಣದಲ್ಲಿ ರಜಪೂತ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡಬೇಕು. ದಣ್ಣೂರ, ಹೂವಿನಹಳ್ಳಿ, ಬಳೂರಗಿ, ಗೌರ (ಬಿ), ದಿಕ್ರಂಗಾ (ಕೆ), ಚೌಡಾಪೂರ ಹಾಗೂ ದೇವಲ ಗಾಣಗಾಪೂರ ಗ್ರಾಮಗಳಲ್ಲಿ ಚಿತಾಗಾರ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ರಜಪೂತ ಸಮಾಜದ ಅಧ್ಯಕ್ಷ ಅಮರಸಿಂಗ್ ಆರ್. ರಜಪೂತ, ಗೌರವಾಧ್ಯಕ್ಷ ಸುರೇಶಸಿಂಗ್ ರಜಪೂತ, ಪ್ರಧಾನ ಕಾರ್ಯದರ್ಶಿ ಶಂಕರಸಿಂಗ್ ರಜಪೂತ, ಖಜಾಂಚಿ ರಾಜುಸಿಂಗ್ ತು. ರಜಪೂತ, ಗೋವಿಂದಸಿಂಗ್ ಲಾಹೋರಕರ್, ಪ್ರತಾಪಸಿಂಗ್ ರಜಪೂತ, ವಿಜಯಸಿಂಗ್ ರಜಪೂತ, ಅಜೀತಸಿಂಗ್ ಆರ್. ರಜಪೂತ, ರಾಜುಸಿಂಗ್ ರಜಪೂತ, ರಾಜುಸಿಂಗ್ ಠಾಕೂರ್, ಸಂಜು ಕುಮಾರ್ ಠಾಕೂರ್, ಮಹಾದೇವಪ್ರಸಾದ ತಿವಾರಿ, ಅಜೀತ್ ಸಿಂಗ್ ನೆಲೋಗಿ ಹಾಗೂ ರಾಮಸಿಂಗ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News