×
Ad

Kalaburagi | ಜಿಲ್ಲೆಯಾದ್ಯಂತ ಶೇ.83.79ರಷ್ಟು ಲಕ್ಷ ಗಣತಿ ನಮೂನೆ ವಿತರಣೆ: ಡಿಸಿ ಇಕ್ರಮ್ ಶರೀಫ್

Update: 2026-07-08 20:34 IST

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಬುಧವಾರದ ಅಂತ್ಯಕ್ಕೆ ಜಿಲ್ಲೆಯ ಒಟ್ಟು 23,71,542 ಮತದಾರರ ಪೈಕಿ 19,87,086 (ಶೇ.83.79) ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಇದುವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) 87,995 (ಶೇ.3.71) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಜೊತೆಗೆ 5,016 (ಶೇ.0.21) ಮತದಾರರು ಸ್ವಯಂಪ್ರೇರಿತವಾಗಿ ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ.

ಮನೆ-ಮನೆಗೆ ಭೇಟಿ ನೀಡಿದ ಬಿಎಲ್‌ಒಗಳ ವರದಿ ಪ್ರಕಾರ, ಇದುವರೆಗೆ 796 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ 1,095 ಮತದಾರರು ಮೃತಪಟ್ಟಿರುವುದು ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News